ಯಲ್ಲಾಪುರ: ಪಿಕ್‍ಅಪ್ ವಾಹನದಲ್ಲಿ ಅಕ್ರಮವಾಗಿ ಯಾವುದೇ ಪಾಸು, ಪರ್ಮಿಟು ಇಲ್ಲದೇ ಬೆಲೆಬಾಳುವ ಸೀಸಂ ಹಾಗೂ ಸಾಗುವಾನಿ ಕಟ್ಟಿಗೆಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೇಡ್ತಿ ಸೇತುವೆ ಬಳಿ ರವಿವಾರ ವಾಹನ ಸಹಿತ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ವ್ಯಕ್ತಿಯನ್ನು ಮಂಜುನಾಥ ಪಟಗಾರ ತೇಲಂಗಾರ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿತರು ಮಂಚಿಕೇರಿ ಬಳಿಯ ಬಿಳ್ಕಿ ಅರಣ್ಯದಿಂದ ಸುಮಾರು 5.50 ಲಕ್ಷ ರೂ ಮೌಲ್ಯದ 22 ಸಾಗವಾನಿ ಹಾಗೂ 2 ಸೀಸಂ ತುಂಡುಗಳನ್ನು ಪಿಕ್‍ಅಪ್ ವಾಹನದಲ್ಲಿ ಮಂಚಿಕೇರಿಯಿಂದ ಯಲ್ಲಾಪುರ ಕಡೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಅರಣ್ಯ ಸಿಬ್ಬಂದಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ ಡಿಎಫ್‍ಒ ಡಿ.ಯತೀಶಕುಮಾರ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಪ್ರಶಾಂತ, ಆರ್‍ಎಫ್‍ಒ ಶ್ರೀಧರ ತೆಗ್ಗಿನಮನೆ, ಡಿಆರ್‍ಎಫ್‍ಒಗಳಾದ ಮಂಜುನಾಥ ಆಗೇರ, ವಿನಯ ಶಿವಣಗಿ, ಕಲ್ಲಪ್ಪ ಬರಗೂರ, ಅರಣ್ಯ ರಕ್ಷಕರಾದ ಜಗದೀಶ ಪಾಲಕನವರ್, ವಿಷ್ಣು ಪೂಜಾರಿ, ಸತ್ಯಪ್ಪ ಉಪ್ಪಾರ, ಮಂಜುನಾಥ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.