ಮುಳ್ಳೇರಿಯಾ ಮಂಡಲಾಂತರ್ಗತ ಸುಳ್ಯ ಹವ್ಯಕ ವಲಯೋತ್ಸವವು ದಿನಾಂಕ 24-09-2017 ನೇ ಆದಿತ್ಯವಾರದಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವು ಮುಂಜಾನೆ 8:30 ರಿಂದ ಗುರುವಂದನೆಯೊಂದಿಗೆ ಪ್ರಾರಂಭವಾಯಿತು. ಧಾರ್ಮಿಕ ಕಾರ್ಯಕ್ರಮಗಳಾದ ಲಲಿತಾ ಹವನ ಹಾಗೂ ದುರ್ಗಾ ಪೂಜೆಯು ವಲಯ ವೈದಿಕ ವಿಭಾಗ ಪ್ರಧಾನರಾದ ವೇ.ಮೂ. ವೆಂಕಟೇಶ ಶಾಸ್ತ್ರಿಯವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಬಂದಿರುವ ಹವ್ಯಕ ಬಂಧುಗಳು ಶಿವ ಪಂಚಾಕ್ಷರಿ ಸ್ತೋತ್ರ ಪಠಣ ಮಾಡಿದರು ಹಾಗೂ ಮಹಿಳೆಯರಿಂದ ಕುಂಕುಮಾರ್ಚನೆಯು ನಡೆಯಿತು.

? ಸಭಾ ಕಾರ್ಯಕ್ರಮ:

ವಲಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಡಿ.ಐ ದಂಬೆಮೂಲೆಯವರ ಅಧ್ಯಕ್ಷತೆ ಯಲ್ಲಿ ಸಭಾ ಕಾರ್ಯಕ್ರಮವು ನಡೆಯಿತು.

ಮಹಾಮಂಡಲ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು, ಮಹಾಮಂಡಲ ಜೀವಿಕ ವಿಭಾಗ ಪ್ರಧಾನರು ಹಾಗೂ ಮುಳ್ಳೇರಿಯಾ ಮಂಡಲದ ಉಸ್ತುವಾರಿ ನೋಡಿಕೊಳ್ಳುವವರಾದ ಬಾಲ ಸುಬ್ರಹ್ಮಣ್ಯ ಭಟ್, ಮುಳ್ಳೇರಿಯಾ ಮಂಡಲ ಅದ್ಯಕ್ಷ ರಾದ ಪ್ರೊ. ಟಿ. ಶ್ರೀ ಕೃಷ್ಣ ಭಟ್, ಕಾರ್ಯದರ್ಶಿ ಗಳಾದ ಬಾಲ ಸುಬ್ರಹ್ಮಣ್ಯ ಭಟ್ ಸರ್ಪಮಲೆ, ಮಾತೃ ಶಾಖೆ ಪ್ರಧಾನರಾದ ಕುಸುಮಾ ಪೆರ್ಮುಖ, ಬಿಂಧು ಸಿಂಧು ಪ್ರಧಾನರಾದ ದೇವಕ್ಕಿ ಜಿ. ಭಟ್ ಪನ್ನೆ, ಮುಷ್ಠಿ ಭಿಕ್ಷೆ ಪ್ರಧಾನರಾದ ಗೀತಾಲಕ್ಷ್ಮಿ ಹಾಗೂ ಮುಖ್ಯ ಅತಿಥಿ ಗಳಾದ ಪದ್ಮಶ್ರೀ ಪ್ರಶಸ್ತಿ ವಿಜೇತ ಗೀರಿಶ್ ಭಾರದ್ವಾಜ್ ರವರು ವೇದಿಕೆಯಲ್ಲಿ ಆಸಿನರಾದರು. ವಲಯ ಕಾರ್ಯದರ್ಶಿ ವಿಜಯ ಕೃಷ್ಣ ಪೆರಾಜೆಯವರು ಸ್ವಾಗತಿಸಿದರು ಹಾಗೂ ವಲಯದ ವಾರ್ಷಿಕ ವರದಿ ಓದಿದರು.

RELATED ARTICLES  ಮೂರು ವರ್ಷಗಳ ನಂತರ ಕೋಡಿ ಬೀಳುವ ಹಂತಕ್ಕೆ ಬಂದಿದೆ ಧರ್ಮಾ ಜಲಾಶಯ.

* ಮಂಡಲ ಕಾರ್ಯದರ್ಶಿ ಬಾಲ ಸುಬ್ರಹ್ಮಣ್ಯ ಸರ್ಪಮಲೆ ಅವರು ಸುಳ್ಯ ವಲಯದ ಎಲ್ಲಾ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತದೆ ಎಂದು ಶ್ಲಾಘಿಸಿದರು.

* ಮಹಾಮಂಡಲದ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು ರವರು ಮಾತನಾಡಿ ಪ್ರಸ್ತುತ ಅಭಯಾಕ್ಷರವು ಬೆಂಗಳೂರಿನಲ್ಲಿ ನಡೆಯುತ್ತಿದ್ದು ಮುಂದೆ ಎಲ್ಲಾ ವಲಯದಲ್ಲೂ ನಡೆಯುತ್ತದೆ ಎಂದು ಹೇಳಿದರು.

* ಮಹಾಮಂಡಲದ ಜೀವಿಕ ವಿಭಾಗ ಪ್ರಧಾನರಾದ ಬಾಲ ಸುಬ್ರಹ್ಮಣ್ಯ ಭಟ್ ರವರು ಉದ್ಯೋಗ ಅರಸುವವರು www.dishadarshi.com ನಲ್ಲಿ ಅರ್ಜಿ ನೊಂದಾಯಿಸಿ ಕೊಳ್ಳಬಹುದು ಎಂದು ತಿಳಿಸಿದರು.

* ಸ್ವಚ್ಛ ಭಾರತ್ ರಾಯಭಾರಿಯಾಗಿ ಆಯ್ಕೆಗೊಂಡಿರುವ ಪದ್ಮಶ್ರೀ ಗಿರೀಶ್ ಭಾರದ್ವಾಜ್ ರವರು ಅಮೃತಪಥದ ಕುರಿತಾಗಿ ಒಂದೆರಡು ಮಾತುಗಳನ್ನಾಡಿದರು.

* ಮಂಡಲಾಧ್ಯಕ್ಷರಾದ ಪ್ರೊ.ಶ್ರೀಕೃಷ್ಣ ಭಟ್ ಹಾಗೂ ವಲಯಾಧ್ಯಕ್ಷರಾದ ಡಿ.ಐ ಸುಬ್ರಹ್ಮಣ್ಯ ಭಟ್ ರವರು ಮಂಡಲ ಹಾಗೂ ವಲಯ ಚಟುವಟಿಕೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡರು.
ವಲಯದ ಹಿರಿಯರಾದ ಲಕ್ಷ್ಮೀನಾರಾಯಣ ಭಟ್ ನೆತ್ರಕೆರೆ, ಡಾ! ಸುಬ್ರಹ್ಮಣ್ಯ ಭಟ್ ಕೋಣೆತೋಟ ಹಾಗೂ ಡಾ! ರಾಮಚಂದ್ರ ಭಟ್ ಕಣಿಯೂರು ರವರನ್ನು ಶಾಲು ಹೊದಿಸಿ ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು.

RELATED ARTICLES  ಹೃದಯಾಘಾತದಿಂದ ಬಸ್ ನಲ್ಲಿಯೇ ಸಾವು

ಶ್ರೀ ಮಠದಿಂದ ಕೊಡುತ್ತಿರುವ ವಿದ್ಯಾರ್ಥಿ ಸಹಾಯ ನಿಧಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಮಠದಿಂದ ಬಂದಿರುವ ಸಹಾಯ ನಿಧಿಯ ಬ್ಯಾಂಕ್ ಚಕ್ಕನ್ನು ಹರಿಪ್ರಸಾದ್ ಪೆರಿಯಾಪುರವರು ಹಸ್ತಾಂತರಿಸಿದರು.

ವಲಯೋತ್ಸವದ ಅಂಗವಾಗಿ ಸೆಪ್ಟೆಂಬರ್ 17 ರಂದು ಶಿವಕೃಪಾ ಕಲಾಮಂದಿರದಲ್ಲಿ ನಡೆದಿರುವ ಸ್ಪರ್ಧಾ ವಿಜೇತರಿಗೆ ಬಹುಮಾನ ಪತ್ರವನ್ನು ಪ್ರೊ.ಶ್ರೀಕೃಷ್ಣ ಭಟ್, ಕುಸುಮಾ ಪೆರ್ಮುಖ, ಗೀತಾ ಲಕ್ಷ್ಮಿ ಹಾಗೂ ದೇವಕ್ಕಿ ಜಿ ಭಟ್ ಪನ್ನೆ ಯವರು ನೀಡಿದರು.

ಮಠದ ಅಂಗಸಂಸ್ಥೆ ಯಾದ ಧರ್ಮಾರಣ್ಯದ ಅಭಿವೃದ್ಧಿಯ ಬಗ್ಗೆ ಸಂಚಾಲಕರಾದ ಗೋಪಾಲಕೃಷ್ಣ ಭಟ್ ಪೈಚಾರ್ ರವರು ಹೇಳಿದರು.

ವಿದ್ಯಾಶಂಕರಿ ಮತ್ತು ರಾಮಮುರಳಿ ಕೃಷ್ಣರವರು ಸಭಾ ಕಾರ್ಯಕ್ರಮ ವನ್ನು ನಿರೂಪಿಸಿದರು.

ಸಭಾಕರ್ಯಕ್ರಮದ ನಂತರ ಭೋಜನದ ವ್ಯವಸ್ಥೆ ಯನ್ನು ಏರ್ಪಡಿಸಲಾಗಿತ್ತು. ನಂತರ ವಲಯದ ಹವ್ಯಕ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು. ವಲಯದ ಪದಾಧಿಕಾರಿಗಳು ಹಾಗೂ ಗುರಿಕ್ಕಾರರುಗಳು ಸಹಕರಿಸಿದರು. ಪತ್ರಕರ್ತ ರಾದ ಗಂಗಾಧರ ಮಟ್ಟಿಯವರು  ಇದ್ದರು.