ಕೆಮ್ಮು ಒಂದು ವ್ಯಾಧಿಯಲ್ಲ, ಬದಲಿಗೆ ನಮ್ಮ ರೋಗ ನಿರೋಧಕ ವ್ಯವಸ್ಥೆಯ ಒಂದು ಅಂಗವಾಗಿದೆ. ನಮ್ಮ ಶ್ವಾಸನಾಳಗಳ ಒಳಗೆ ಅಂಟಿಕೊಳ್ಳುವ ದ್ರವ ಜಿನುಗುತ್ತದೆ. ಇದು ಗಾಳಿಯಲ್ಲಿ ತೇಲಿ ಬರುವ ರೋಗಾಣುಗಳು ಹಾಗೂ ಧೂಳನ್ನು ಅಂಟಿಸಿಕೊಳ್ಳುವ ಮೂಲಕ ಶ್ವಾಸಕೋಶಗಳ ಒಳಗೆ ಇವುಗಳ ಪ್ರವೇಶವನ್ನು ಪ್ರತಿಬಂಧಿಸುತ್ತದೆ. ಹೀಗೆ ವೈರಾಣುಗಳನ್ನು ಅಂಟಿಸಿಕೊಂಡ ದ್ರವ ಗಟ್ಟಿಯಾಗಿ ಕಫದ ರೂಪ ಪಡೆಯುತ್ತದೆ. ಇದನ್ನು ಕೆರೆದು ನಿವಾರಿಸುವ ಕ್ರಿಯೆಯೇ ಕೆಮ್ಮು. ಕೆಮ್ಮನ್ನು ನಿವಾರಿಸಬೇಕೆಂದರೆ ಅಂಟಿಕೊಂಡಿರುವ ಈ ಕಫವನ್ನು ನಿವಾರಿಸಬೇಕು. ಕಫ ಗಟ್ಟಿಯಾಗಿದ್ದಷ್ಟೂ ಇದನ್ನು ನಿವಾರಿಸಲು ಕಷ್ಟವಾಗುತ್ತಾ ಕೆಮ್ಮು ಅನವರತವಾಗುತ್ತದೆ. ಕೆಲವು ಸಾಮಾಗ್ರಿಗಳು ಈ ಕಫವನ್ನು ಸಡಿಲಿಸಲು ಸಮರ್ಥವಾಗಿವೆ. ಮಾರುಕಟ್ಟೆಯಲ್ಲಿ ಕೆಮ್ಮಿನ ಸಿರಪ್‌‌ಗಳು ಸಿಗುತ್ತವೆ

ಇವು ಬಲವಂತವಾಗಿ ಕಫವನ್ನು ನಿವಾರಿಸುತ್ತವೆಯಾದರೂ ಇದಕ್ಕಾಗಿ ಬಳಸಲಾಗಿರುವ ಔಷಧಿಯಲ್ಲಿ ಮಾದಕ ಪದಾರ್ಥಗಳೂ ಇರುತ್ತವೆ. ಇವು ಶರೀರವನ್ನು ಶಿಥಿಲಗೊಳಿಸಬಹುದು ಹಾಗೂ ಸುಸ್ತು ಎದುರಾಗಬಹುದು. ಇವುಗಳ ಬದಲಿಗೆ ಕೆಲವು ಮನೆಮದ್ದುಗಳನ್ನು ಬಳಸಿದರೆ ಇವು ಸುರಕ್ಷಿತವೂ ಫಲಪ್ರದವೂ ಆಗಿರುತ್ತವೆ. ಬನ್ನಿ, ಈ ಮನೆಮದ್ದುಗಳ ಬಗ್ಗೆ ನೋಡೋಣ…

RELATED ARTICLES  || ಹಿಮಾಲಯ ಕೃತ ಶಿವಸ್ತೋತ್ರಮ್ ||

ಬಾದಾಮಿ

ಕೆಮ್ಮು ನಿವಾರಿಸಲು ಬಲು ಪ್ರಾಚೀನವಾದ ವಿಧಾನವೆಂದರೆ ಬಾದಾಮಿ ಅರೆದು ಸೇವಿಸುವುದು. ಸುಮಾರು ಏಳೆಂಟು ಬಾದಾಮಿಗಳನ್ನು ರಾತ್ರಿಯಿಡೀ ತಣ್ಣೀರಿನಲ್ಲಿ ನೆನೆಸಿಡಿ. ಮರುದಿನ ಸಿಪ್ಪೆ ಸುಲಿದು ನುಣ್ಣಗೆ ಅರೆಯಿರಿ. ಇದಕ್ಕೆ ಕೊಂಚ ಬೆಣ್ಣೆ ಮತ್ತು ಸಕ್ಕರೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ.
ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಈರುಳ್ಳಿ

ಈರುಳ್ಳಿಯನ್ನು ಹೆಚ್ಚಿ ಜಜ್ಜಿ ಹಿಂಡಿ ರಸವನ್ನು ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುವುದು ಮಾತ್ರವಲ್ಲ ಕಟ್ಟಿಕೊಂಡಿರುವ ಎದೆಯೂ ಸಡಿಲಗೊಳ್ಳುತ್ತದೆ. ಪ್ರತಿ ಆರು ಗಂಟೆಗಳಿಗೊಮ್ಮೆ ಒಂದರಿಂದ ಎರಡು ಚಿಕ್ಕ ಚಮಚ ಈರುಳ್ಳಿ ರಸವನ್ನು ಸಮಪ್ರಮಾಣದ ಜೇನಿನೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ.
ಹಸಿಶುಂಠಿ

ಈ ವಿಧಾನವನ್ನು ಸಾಮಾನ್ಯವಾಗಿ ವಿಶ್ವದೆಲ್ಲೆಡೆ ಕೆಮ್ಮಿನ ನಿವಾರಣೆಗಾಗಿ ಬಳಸಲಾಗುತ್ತದೆ. ಅರ್ಧ ದೊಡ್ಡಚಮಚ ಹಸಿಶುಂಠಿಯನ್ನು ಜಜ್ಜಿ ಕೊಂಚ ಕಾಳುಮೆಣಸಿನ ಪುಡಿ ಹಾಗೂ ಒಂದು ದೊಡ್ಡ ಚಮಚ ಜೇನು ಮತ್ತು ಕೊಂಚ ಶಿರ್ಕಾ ಸೇರಿಸಿ. ಇವೆಲ್ಲವನ್ನೂ ಸುಮಾರು ಎರಡರಿಂದ ಮೂರು ದೊಡ್ಡಚಮಚ ನೀರು ಬೆರೆಸಿ ಈ ಪ್ರಮಾಣವನ್ನು ದಿನದಲ್ಲಿ ಮೂರು ಹೊತ್ತು ಸೇವಿಸಿ ಖಾಲಿ ಮಾಡಬೇಕು. ಇದರ ಬ್ಯಾಕ್ಟೀರಿಯಾ ನಿರೋಧಕ ಗುಣ ಹಲವು ರೀತಿಯ ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ. ಕೆಮ್ಮಿನ ಒಂದು ಅಡ್ಡಪರಿಣಾಮವಾಗಿರುವ ಸೋಂಕನ್ನು ಹಸಿಶುಂಠಿ ನಿವಾರಿಸುವ ಕಾರಣ ಕೆಮ್ಮಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ.

RELATED ARTICLES  ಭೀಕರ ಅಪಘಾತ : ಯುವಕ ಸ್ಥಳದಲ್ಲಿಯೇ ಸಾವು : ಕಾರು ನಿಲ್ಲಿಸದೇ ಪರಾರಿಯಾದ ಚಾಲಕ.

ಲಿಂಬೆ

ಲಿಂಬೆರಸ ಅತ್ಯುತ್ತಮವಾ ಕಫಹಾರಿಯಾಗಿದ್ದು ವಿಶೇಷವಾಗಿ ಕೆಮ್ಮಿನ ಮೂಲಕ ಎದುರಾಗಿದ್ದ ಗಂಟಲಿನ ಕಿರಿಕಿರಿ ಹಾಗೂ ತುರಿಕೆಯನ್ನು ನಿವಾರಿಸುತ್ತವೆ.

ವೀಳ್ಯದೆಲೆ

ಕೆಲವು ವೀಳ್ಯದೆಲೆಗಳನ್ನು ನುಣ್ಣಗೆ ಅರೆದು ಎದೆಯ ಮೇಲೆ ಹಚ್ಚಿ. ಇದರಿಂದ ನಿಧಾನವಾಗಿ ಕೆಮ್ಮು ಕಡಿಮೆಯಾಗುತ್ತದೆ. ಕೆಮ್ಮು ಎದುರಾದರೆ ರೋಗಿ ಧೂಮಪಾನ, ಮಾಂಸಾಹಾರ, ಸಕ್ಕರೆ, ಟೀ, ಕಾಫಿ ಸಂಸ್ಕರಿತ ಆಹಾರಗಳಿಂದ ದೂರವಿದ್ದಷ್ಟೂ ಒಳ್ಳೆಯದು.