ಯಲ್ಲಾಪುರ: ಯಾವುದೇ ಪಾಸ್ ಪರ್ಮಿಟ್ ಇಲ್ಲದೇ ಅಕ್ರಮವಾಗಿ, ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಲಾರಿಯನ್ನು ತಡೆದು ಒಂಟೆಗಳನ್ನು ರವಿವಾರ ಪೊಲೀಸರು ರಕ್ಷಿಸಿದ್ದಾರೆ.
ಖಚಿತ ಸುಳಿವಿನ ಮೇರೆಗೆ ಪೊಲೀಸರು ದಾಳಿ ನಡೆಸಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಜೋಡುಕೆರೆಯ ಬಳಿ ಲಾರಿ ನಿಲ್ಲಿಸಲು ಸೂಚಿಸಿದಾಗ್ಯೂ, ಸೂಚನೆ ಲೆಕ್ಕಿಸದೇ ಲಾರಿ ಪರಾರಿಯಾಗಲು ಯತ್ನಿಸಿದಾಗ ಶಿವಾಜಿ ಸರ್ಕಲ್ ಬಳಿ ಲಾರಿ ತಡೆದಿದ್ದಾರೆ.

RELATED ARTICLES  ಮೇ ೨೬ಕ್ಕೆ "ಆಚೆ" ಚಿತ್ರ ರಿಲೀಸ್

ಆರೋಪಿತರಾದ ಕಾಂತೇಶ ಹನುಮಪ್ಪ ಭಜಂತ್ರಿ ಬ್ಯಾಡಗಿ ಹಾವೇರಿ, ಪ್ರಕಾಶ ಫಕಿರಪ್ಪ ನಾಯಕ ಹಾವೇರಿ ಹಾಗೂ ಈರಪ್ಪ ಮೇಗಪ್ಪ ನಾಯಕ ಹಾವೇರಿ ಇವರು, ಈಚರ್
ಲಾರಿಯಲ್ಲಿ ಒತ್ತೊತ್ತಾಗಿ,ಹಿಂಸಾತ್ಮಕ ರೀತಿಯಲ್ಲಿ ಮೂರು ಲಕ್ಷರೂ ಮೌಲ್ಯದ 6 ಒಂಟೆಗಳನ್ನು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಪೋಲಿಸರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿ ಡಿ.31 ರಂದು ರಾತ್ರಿ ಎಂಟು ಗಂಟೆಯಿಂದ ನೈಟ್ ಕರ್ಫ್ಯೂ