ದೆಹಲಿ: ಭಾರತವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಬೇಕು ಎಂದು ವಿಶ್ವ ಸಂಸ್ಥೆೆಯ ಭದ್ರತಾ ಸಮಿತಿಯಲ್ಲಿ ಪಾಕ್ ದಂಬಾಲು ಬಿದ್ದಿರುವುದಾಗಿ ಪಕ್ ದೈನಿಕ ‘ದಿ ಎಕ್‌ಸ್‌ಪ್ರೆೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
ಗಾಯಗೊಂಡಿದ್ದ ಪ್ಯಾಲಿಸ್ತೇನ್ ಮಹಿಳೆಯ ಚಿತ್ರ ಹಿಡಿದ ಪಾಕ್ ರಾಯಭಾರಿ ಮಲೀಹಾ ಲೋಧಿ ಆಕೆಯನ್ನು ಕಾಶ್ಮೀರದ ಯುವತಿ ಎಂದು ಹೇಳಿ ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೀಡಾಗಿದ್ದರು.
ಭಾರತವನ್ನು ಭಯೋತ್ಪಾದಕ ದೇಶವೆಂದು ಘೋಷಿಸುವಂತೆ ಮಾಡಲು ಸಾಕ್ಷ್ಯಗಳನ್ನು ಒದಗಿಸಲು ಪಾಕ್ ಹರಸಾಹಸ ಪಡುತ್ತಿದೆ ಎಂದು ವರದಿಯಾಗಿದೆ.
ಈ ನಿಟ್ಟಿನಲ್ಲಿ ಪಾಕ್ ತನ್ನ ಆಪ್ತ ಮಿತ್ರ ಹಾಗೂ ಭದ್ರತಾ ಸಮಿತಿಯ ಖಾಯಂ ಸದಸ್ಯ ದೇಶಗಳಲ್ಲಿ ಒಂದಾಗಿರುವ ಚೀನಾ ಹಾಗೂ ರಷ್ಯಾದ ಬಳಿ ಬೆಂಬಲ ಕೋರಲು ಪಾಕ್ ದಂಬಾಳು ಬಿದ್ದಿರುವುದಾಗಿ ತಿಳಿದುಬಂದಿದೆ.
ವಿಶ್ವ ಸಂಸ್ಥೆೆಯ ವಾರ್ಷಿಕ ಮಹಾ ಸಭೆಯಲ್ಲಿ ಆದ ಮುಖಭಂಗದ ಬಳಿಕ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್‌ಸ್‌ರನ್ನು ಭೇಟಿ ಮಾಡಿದ ಪಾಕ್ ಪ್ರಧಾನಿ ಶಾಹಿದ್ ಖಕಾನ್ ಅಬ್ಬಾಸಿ ಇದೇ ವಿಚಾರವಾಗಿ ಚರ್ಚಿಸಿದ್ದಾಾರೆ ಎಂದು ಹೇಳಲಾಗಿದೆ. ಮುಂದಿನ ತಿಂಗಳು ಅಮೆರಿಕದ ಉನ್ನತ ನಿಯೋಗವೊಂದು ಪಾಕ್‌ಗೆ ಭೇಟಿ ನೀಡಲಿದ್ದು ನಿಯಂತ್ರಣ ರೇಖೆ ಬಳಿ ಭಾರತ ನಡೆಸುತ್ತಿದೆ ಎನ್ನಲಾದ ದೌರ್ಜನ್ಯದ ಕುರಿತು ಸಾಕ್ಷ್ಯ ನೀಡಲು ಪಾಕ್ ಸಜ್ಜಾಗುತ್ತಿದೆ ಎಂದು ತಿಳಿದುಬಂದಿದೆ.
ಕಳೆ ದ ತಿಂಗಳು ತಮ್ಮ ಸರಕಾರದ ಅಫ್ಘಾನಿಸ್ತಾನ ನೀತಿಯನ್ನು ಘೋಷಿಸಿದ್ದ ಅಧ್ಯಕ್ಷ ಡೊನಾಲ್‌ಡ್ ಟ್ರಂಪ್ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನವನ್ನು ಕುಟುಕಿದ್ದರು.
ವಿಶ್ವ ಸಂಸ್ಥೆೆಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ್ದ ಟ್ರಂಪ್ ‘‘ಅಲ್ ಕಯ್ದಾಾ, ಹೆಜ್ಬೊಲ್ಲ, ತಾಲಿಬಾನ್‌ನಂಥ ಸಂಘಟನೆಗಳಿಗೆ ಆರ್ಥಿಕ ನೆರವು ಹಾಗೂ ಅಡಗುದಾಣಗಳನ್ನು ಒದಗಿಸುತ್ತಿರುವ ದೇಶಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’’ ಎಂದು ಹೇಳಿದ್ದರು.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯನ್ನಾಗಿ ಮಾಡುತ್ತಿರುವ ಭಾರತ ಲಷ್ಕರೆ, ಜೈಷೆ ಮಹಮ್ಮದ್‌ನಂಥ ಸಂಘಟನೆಗಳನ್ನು ಭಯೋತ್ಪಾದಕರೆಂದು ಜಪಾನ್ ಹಾಗೂ ಬ್ರಿಕ್‌ಸ್ ಸದಸ್ಯ ದೇಶಗಳ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.