ಹೊನ್ನಾವರ: ಎನ್.ಪಿ.ಎಸ್. ಹೊಸ ಪಿಂಚಣಿ ಯೋಜನೆ ನೌಕರರಿಗೆ ನಿವ್ರತ್ತಿ ಹೊಂದದ ಮೇಲೆ ಲಾಭದಯಕವಲ್ಲ ಅದು ಸಾಕಷ್ಟು ಗೊಂದಲ ಸಮಸ್ಯೆಗಳಿಂದ ಕೂಡಿದೆ ಮತ್ತು ಗಂಬೀರ ಲೋಪಗಳಿಂದ ಕೂಡಿದೆ ಎಂದು ಎನ್.ಪಿ.ಎಸ್. ನೌಕರರ ಸಂಘದ ತಾಲೂಕು ಅಧ್ಯಕ್ಷ ವಿ.ಎ.ಪಟಗಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಭಾನುವಾರ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಎನ್.ಪಿ.ಎಸ್. ವಿಭಾಗಮಟ್ಟದ ಸಮಾವೇಶದ ಪೂರ್ವಭಾವಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನೌಕರರಾದವರಿಗೆ ಸಮಸ್ಯೆಯ ಆಳ ಮತ್ತು ಸಮಸ್ಯೆಯ ಸುಳಿವಿನ ಬಗ್ಗೆ ತಿಳುವಳಿಕೆಯ ಕೊರತೆ ಇದೆ. ನಾವು ಅವುಗಳನ್ನು ಅರ್ಥ ಮಾಡಿಕೊಳ್ಳುವ ಅನಿವಾರ್ಯ ಇದೆ ಎಂದರು.ಈ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾದ್ಯಕ್ಷ ಗಣೇಶ ಹೆಗಡೆ ಎನ್.ಎಸ್.ಡಿ.ಎಲ್, ಕಾರ್ಯವೈಖರಿ, ಸಿ.ಆರ್.ಎ. ಕಟಾವು ಮೊತ್ತ ವಿಂಗಡನೆ, ಎಸ್.ಬಿ.ಐ. ಎಲ್ ಐ.ಸಿ ಪಾತ್ರ ಗಳನ್ನು ಅನೇಕ ದೃಷ್ಟಾಂತಗಳ ಮೂಲಕ ವಿವರಿಸಿದರು.

RELATED ARTICLES  ಕಾನೂನು ಮತ್ತು ಸರಕಾರದ ನಡವಳಿಕೆಗೆ ವ್ಯತಿರಿಕ್ತವಾಗಿ ನೋಟಿಸ್ ; ಅತಿಕ್ರಮಣದಾರರನ್ನ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರೀಯೆಗೆ ಖಂಡನೆ- ರವೀಂದ್ರ ನಾಯ್ಕ.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾ ಅಧ್ಯಕ್ಷರು ಸಾಲ್ಕೋಡ್ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ವಿ.ಎ.ಪಟಗಾರ ವಹಿಸಿದ್ದರು. ಈ ಸಂದರ್ಭದಲ್ಲಿ ಹಾಜರಿದ್ದ ತಾಲೂಕು ನೌಕರರ ಸಂಘದ ಅಧ್ಯಕ್ಷ ಆರ್.ಪಿ.ಭಟ್, ಉಪಾಧ್ಯಕ್ಷ ಎಮ್.ಜಿ.ನಾಯ್ಕ, ಕಾರ್ಯದರ್ಶಿ ಆರ್.ಟಿ.ನಾಯ್ಕ ಎನ್.ಪಿ.ಎಸ್ ಸಂಘಟನೆ ಕುರಿತು ಸೂಕ್ತ ಮಾಹಿತಿ ನೀಡಿದರು. ತಾಲೂಕಿನ ಎಲ್ಲಾ ಪಿಡಿಓ ಮತ್ತು ನೌಕರರು ಈ ಸಂದರ್ಭದಲ್ಲಿ ಹಾಜರಿದ್ದರು.

RELATED ARTICLES  ವೃದ್ದೆಯಮೇಲೆ ಹಲ್ಲೆ ಮಾಡಿದ ಅಪರಿಚಿತ ಗುಂಪು