ನವದೆಹಲಿ: ಹಿರಿಯ ಪತ್ರಕರ್ತೆ ಮತ್ತು ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಪ್ರತಿಭಟಿಸಿ  ಆಕ್ಟೋಬರ್ 5ರಂದು ಇಲ್ಲಿ ಮಂಡಿಹೌಸ್ ವೃತ್ತದಿಂದ ಜಂತರ್ ಮಂತರ್ ತನಕ ರ‍್ಯಾಲಿ ನಡೆಯಲಿದೆ.

ರಾಷ್ಟ್ರೀಯ ದಲಿತ ಅಧಿಕಾರ ವೇದಿಕೆಯ ಜಿಗ್ನೇಶ್ ಮೇವಾನಿ, ಸ್ವರಾಜ್ ಅಭಿಯಾನದ ಪ್ರೊ.ಯೋಗೇಂದ್ರ ಯಾದವ್, ಚಿಂತಕ ಅಚಿನ್ ವನಾಯಕ್, ಆಮ್ ಆದ್ಮಿ ಪಾರ್ಟಿಯ ದಿಲೀಪ್ ಪಾಂಡೆ, ಹರ್ಷ್ ಮಂದೆರ್,ಡಾ.ವಾಸು ಹಾಗೂ ಕೆ.ಎನ್.ರಾಮಚಂದ್ರನ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

RELATED ARTICLES  ಇನ್ಮುಂದೆ ಕರ್ನಾಟಕದ ಈ ಪ್ರಸಿದ್ಧ ಮಠದಲ್ಲಿ ಅನ್ ಲೈನ್ ಪೂಜೆ ಲಭ್ಯ..!!

ಹಂತಕರು ಯಾರೆಂಬುದು ತನಿಖೆಯಿಂದ ಹೊರಬಿದ್ದೀತು. ಆದರೆ ಗೌರಿ ಹತ್ಯೆಯನ್ನು ಸಮರ್ಥಿಸಿಕೊಂಡು, ಲಜ್ಜೆಯಿಲ್ಲದೆ ಸಂಭ್ರಮಿಸಿದವರು ಹಲವು ಬಗೆಗಳಲ್ಲಿ ಆಳುವವರೊಂದಿಗೆ ಸಂಬಂಧ ಹೊಂದಿದವರಾಗಿದ್ದಾರೆ. ಇಂತಹವರ ಕೃತ್ಯದ ಕುರಿತು ಪ್ರಧಾನಮಂತ್ರಿಯವರ ಮೌನ ಧಾರಣೆ ಖಂಡನೀಯ ಎಂದು ಅವರು ಹೇಳಿದರು.

ಗೌರಿ ಹತ್ಯೆ ನಡೆದು ಸರಿಯಾಗಿ ಒಂದು ತಿಂಗಳು ಸಂದ ದಿನದಂದು ನಡೆಯುವ ಈ ರ‍್ಯಾಲಿಯಲ್ಲಿ ದೇಶದ ನಾನಾ ರಾಜ್ಯಗಳ ಸಾವಿರಾರು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅದೇ ದಿನದಂದು ದೇಶದಾದ್ಯಂತ ಹಲವು ಭಾಗಗಳಲ್ಲಿ ಗೌರಿ ಸಾವಿಗೆ ನ್ಯಾಯ ಕೋರಿ ಸಭೆಗಳು ಜರುಗಲಿವೆ. ‘ಗಾಂಧೀಜಿಯನ್ನು ಕೊಂದವರೇ, ಗೌರಿಯನ್ನೂ ಕೊಂದಿದ್ದಾರೆ’ ಎಂಬ ಘೋಷವಾಕ್ಯದೊಂದಿಗೆ ದೇಶದಾದ್ಯಂತ ಗಾಂಧಿ ಪ್ರತಿಮೆಗಳ ಮುಂದೆ ಧರಣಿ ಪ್ರದರ್ಶನಗಳು ನಡೆಯಲಿವೆ. ಭಾರತೀಯ ಪ್ರೆಸ್ ಕ್ಲಬ್ ಗಳ ಒಕ್ಕೂಟ ತಿಳಿಸಿರುವಂತೆ ಎಲ್ಲ ಪ್ರೆಸ್ ಕ್ಲಬ್ ಗಳು ಈ ಧರಣಿಯಲ್ಲಿ ಭಾಗವಹಿಸಲಿವೆ ಎಂದು ಅವರು ತಿಳಿಸಿದರು.

RELATED ARTICLES  ಮುರುಘಾ ಮಠದ ಶ್ರೀ ಅರೆಸ್ಟ್ ಆಗಿಲ್ಲ : ಗಾಳಿ ಸುದ್ದಿಗೆ ಕಿವಿ ಕೊಡಬೇಡಿ ಎಂದ ಶ್ರೀಗಳು