ಸ್ಯಾನ್ ಫ್ರಾನ್ಸಿಸ್ಕೋ: ಫೇಸ್ಬುಕ್ ತನ್ನ ಜನಪ್ರಿಯ ಫೀಚರ್ ‘ವೈ ಫೈ ಹುಡುಕಿ’ಯನ್ನು ಜಾಗತಿಕವಾಗಿ ವಿಸ್ತರಿಸಿದ್ದು, ಈಗ ಐ ಒ ಎಸ್ ಮತ್ತು ಆಂಡ್ರಾಯ್ಡ್ ಫೋನುಗಳನ್ನು ಬಳಸುವ ೨ ಬಿಲಿಯನ್ ಫೇಸ್ಬುಕ್ ಬಳಕೆದಾರರಿಗೆ ಲಭ್ಯವಾಗಲಿದೆ.
ಸಾಮಾಜಿಕ ಸಂಪರ್ಕ ಜಾಲ ದೈತ್ಯ ಕಳೆದ ವರ್ಷವಷ್ಟೇ, ಆಯ್ದ ಕೆಲವು ದೇಶಗಳಲ್ಲಿ, ಐ ಒ ಎಸ್ ಬಳಕೆದಾರರಿಗೆ ‘ವೈ ಫೈ ಹುಡುಕಿ’ ಫೀಚರ್ ಒದಗಿಸಿ ಪರೀಕ್ಷೆ ನಡೆಸಿತ್ತು.
“ನಾವು ‘ವೈ ಫೈ ಹುಡುಕಿ’ಯನ್ನು ವಿಶ್ವದಾದ್ಯಂತ ಐ ಒ ಎಸ್ ಮತ್ತು ಆಂಡ್ರಾಯ್ಡ್ ಫೋನುಗಳ ಬಳಕೆದಾರರಿಗೆ ವಿಸ್ತರಿಸುತ್ತಿದ್ದೇವೆ. ಕಳೆದ ವರ್ಷ ಬೆರಳೆಣಿಕೆಯಷ್ಟೇ ದೇಶಗಳಲ್ಲಿ ಇದನ್ನು ಪರಿಚಯಿಸಿದ್ದೆವು. ಎಲ್ಲಿ ಮೊಬೈಲ್ ಇಂಟರ್ ನೆಟ್ ಕೊರತೆ ಇತ್ತೋ ಅಲ್ಲೆಲ್ಲ ಇದು ಬಹಳ ಉಪಯುಕ್ತವಾಗಿತ್ತು” ಎಂದು ಫೇಸ್ಬುಕ್ ನ ಎಂಜಿನಿಯರಿಂಗ್ ನಿರ್ದೇಶಕ ಅಲೆಕ್ಸ್ ಹಿಮೇಲ್ ಶುಕ್ರವಾರ ರಾತ್ರಿ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
ಫೇಸ್ಬುಕ್ ನಲ್ಲಿ ಪುಟ ತೆರೆದಿರುವ ವ್ಯಾವಹಾರಿಕ ಸಂಸ್ಥೆಗಳು ವೈ ಫೈ ಹಂಚಿಕೊಂಡಿದ್ದರೆ, ಅವುಗಳನ್ನು ಹುಡುಕಲು ಈ ಫೀಚರ್ ಅವಕಾಶ ಮಾಡಿಕೊಡುತ್ತದೆ.
“ನಿಮ್ಮ ಮೊಬೈಲ್ ಇಂಟರ್ನೆಟ್ ನಲ್ಲಿ ಸಿಗ್ನಲ್ ಕಾಣೆಯಾದಾಗ, ಹತ್ತಿರದಲ್ಲಿರುವ ಈ ವೈ ಫೈ ಸ್ಪಾಟ್ ಗಳನ್ನು ಹುಡುಕಲು ಇದು ಅನುವು ಮಾಡಿಕೊಡುತ್ತದೆ” ಎಂದು ಕೂಡ ಅವರು ಬರೆದಿದ್ದಾರೆ.
ಇದನ್ನು ಬಳಸಲು ನಿಮ್ಮ ಮೊಬೈಲ್ ನಲಿ ಫೇಸ್ಬುಕ್ ಆಪ್ ತೆರೆದು, ‘ಮೋರ್’ ಟ್ಯಾಬ್ ಮೇಲೆ ಕ್ಲಿಕ್ಕಿಸಿ, ‘ಫೈಂಡ್ ವೈ ಫೈ’ ಮೇಲೆ ಒತ್ತಬೇಕು.
RELATED ARTICLES  ನಮ್ಮ ಜಿಲ್ಲೆಯ ಪ್ರತಿಭೆ ಸಂಕೇತ ಗಾಂವ್ಕರ್ ಗೆಲುವಿಗೆ ನೀವೂ ಬೆಂಬಲಿಸಿ.