ಕುಮಟಾ : ದಿವಂಗತ ಡಾಕ್ಟರ್ ಬಿ.ಎಂ ಪೈ ಅವರ 30ನೇ ಪುಣ್ಯತಿಥಿಯ ನಿಮಿತ್ತ ಹಿರಿಯ ಪ್ರಾಥಮಿಕ ಮೀನುಗಾರರ ಶಾಲೆ ಹೆಡಬಂದರ್ ಕುಮಟಾದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಭಾರತದ ಸೇವಾದಳ ಸಹಕಾರದೊಂದಿಗೆ ನಡೆಯಿತು. ಈ ಪ್ರಯುಕ್ತ ಶಾಲೆಗೆ ಅವಶ್ಯವಾಗಿ ಬೇಕಾದ ಗ್ರೀನ್ ಬೋರ್ಡ್ ಮತ್ತು ಇತರ ಸಾಮಗ್ರಿಗಳನ್ನು ಶಾಲೆಗೆ ಕೊಡಲಾಯಿತು. ಇದೇ ಸಂದರ್ಭದಲ್ಲಿ ಎಲ್ಲ ಮಕ್ಕಳಿಗೂ ಪಠ್ಯಪುಸ್ತಕ ಪೆನ್ಸಿಲ್ ಪೆನ್ನು ಮತ್ತು ಇತರೆ ಸಲಕರಣೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹಿರಿಯದಂತೆ ವೈದ್ಯರಾದ ಡಾಕ್ಟರ್ ಡಿ ಡಿ ನಾಯಕ್ ರವರು ದಂತ ರಕ್ಷಣೆಯ ಮಹತ್ವವನ್ನು ಮತ್ತು ಎಲ್ಲ ಮಕ್ಕಳ ದಂತ ತಪಾಸಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಮತ್ತೊಂದು ವಿಶಿಷ್ಟ ಕಾರ್ಯಕ್ರಮ ಸೇವಾದಳದ ವತಿಯಿಂದ ನಡೆಯಿತು. ಅದೇನೆಂದರೆ ಸೇವಾದಳದ ಪದಾಧಿಕಾರಿಯದಂತಹ ಮತ್ತು ಶಾಲೆಯ ಮುಖ್ಯೋಪಾಧ್ಯಾಪಕರಾದ ಕಿರಣ್ ನಾಯಕ್ ರವರು ಧ್ವಜ ಸಂಹಿತೆಯ ಮಹತ್ವ ಮತ್ತು ನಡೆದು ಬಂದ ದಾರಿಯನ್ನು ವಿವರಿಸಿದ್ದರು.

RELATED ARTICLES  ರಾಜಕೀಯ ಮಾಡುವುದಾದರೆ ಜನ ಮೆಚ್ಚುವ ರೀತಿಯಲ್ಲಿ ಮಾಡಬೇಕು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ

ಈ ಸಂದರ್ಭದಲ್ಲಿ ಟ್ರಸ್ಟಿನ ಹಿರಿಯ ಸದಸ್ಯರಾದ ಶ್ರೀಯುತ ತಿವಿಕ್ರಂ ಪೈ ಅವರು ಎಲ್ಲರನ್ನೂ ಸ್ವಾಗತಿಸಿ ಶ್ರೀಯುತ ಬಿ ಎಂ ಪೈ ಅವರ ಆದರ್ಶ ಮತ್ತು ಟ್ರಸ್ಟ್ ನಡೆಸಿರುವ ನಡೆಸುತ್ತಿರುವ ಕಾರ್ಯ ಚಟುವಟಿಕೆಯನ್ನು ವಿವರಿಸಿದರು. ಈ ಸಭೆಯ ಅಧ್ಯಕ್ಷತೆಯನ್ನು ಮ್ಯಾನೇಜಿಂಗ್ ಟ್ರಸ್ಟಿ ಶ್ರೀಯುತ ಎಂ ಬಿ ಪೈಯವರು ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಆತ್ಮೀಯತೆಯಿಂದ ಬರಮಾಡಿಕೊಂಡರು. ಇನ್ನೊಬ್ಬ ಟ್ರಸ್ಟಿ, ಶ್ರೀಯುತ ಕೃಷ್ಣ ಬಾಬಾ ಪೈ ರವರು ಮುದ್ದು ಮಕ್ಕಳಿಗೆ ಸಲಕರಣೆ ವಿತರಣೆಯಲ್ಲಿ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ಬಿ. ಆರ್. ಸಿ. ಶ್ರೀಮತಿ ರೇಖಾ ನಾಯಕ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಇನ್ನೊಬ್ಬ ಟ್ರಸ್ಟಿ, ಶ್ರೀಯುತ ಶ್ರೀಕಾಂತ್ ಭಟ್ ರವರು ಕಾರ್ಯಕ್ರಮವನ್ನು ನಿರೂಪಿಸಿದ್ದರು. ಭಾರತ ಸೇವಾದಳದ ತಾಲೂಕ ಅಧ್ಯಕ್ಷರಾದ ಶ್ರೀಯುತ ಸಂತೋಷ ನಾಯಕ ಮಾತನಾಡಿ ಸೇವಾದಳವು ಆಗಸ್ಟ್ 11ರಿಂದ 17ರವರೆಗೆ ಘರ ಘರ ಘರ್ಮೆ ತರಂಗ ಎಂಬ ವಿನೂತನ ಕಾರ್ಯಕ್ರಮವನ್ನು ಮಾಡಲಿದೆ ಎಂದರು. ಈ ಕಾರ್ಯಕ್ರಮದಲ್ಲಿ ಹಿರಿಯ ರೋಟೆರಿಯನ್ ಸುರೇಶ್ ಭಟ್ ರವರು ಉಪಸ್ಥಿತರಿದ್ದರು.

RELATED ARTICLES  ಅರಬೈಲ್ ಘಟ್ಟದಲ್ಲಿ ಲಾರಿ ಪಲ್ಟಿ.