ಕಾರವಾರ:ಮಕ್ಕಳನ್ನು 1ನೇ ತರಗತಿ ಸೇರಲು
ಆರು ವರ್ಷ ತುಂಬಲೇಬೇಕು ಎಂದು ವಯೋಮಿತಿ ನಿಗದಿ ವಿಚಾರದಲ್ಲಿ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದ್ದು ಇದರ ಬಗ್ಗೆ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.ಈ ಹಿಂದೆ ಮಕ್ಕಳು1ನೇ ತರಗತಿಗೆ ಸೇರಿಸಲು 5 ವರ್ಷ. 5 ತಿಂಗಳು ಹಾಗೂ 5 ವರ್ಷ 10 ತಿಂಗಳು ಆಗಿರಬೇಕು ಎಂಬ ನಿಯಮವಿತ್ತು. ಆದರೆ ಇದೀಗ ಆರ್‌ಟಿಇ, ಶಿಕ್ಷಣ ಕಾಯ್ದೆ,
ಕಡ್ಡಾಯ ಶಿಕ್ಷಣ ನಿಯಮ 2012 ಅನ್ವಯ
ಹೊಸ ವಯೋಮಿತಿಯನ್ನು ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎನ್ನಲಾಗಿದೆ.
ಕಡ್ಡಾಯವಾಗಿ ಜೂನ್ ಒಂದನೇ ತಾರೀಖಿಗೆ
ಮಗುವಿನ ವಯಸ್ಸು 6 ವರ್ಷ ಪೂರ್ಣಗೊಂಡಿರಬೇಕು ಎಂದು ಹೇಳಿದೆ. ಈ ಹಿಂದೆ 5 ವರ್ಷ 5 ತಿಂಗಳು 5 ವರ್ಷ ಆದರೆ ಸಾಕು ಎಂಬ ನಿಯಮವಿತ್ತು. ಆದರೆ ಇದೀಗ ಅದನ್ನು ಪರಿಷ್ಕರಣೆ ಮಾಡಿ ನೂತನ ವಯೋಮಿತಿಯನ್ನು ನಿಗದಿ ಮಾಡಿ ಸುತ್ತೋಲೆ ಹೊರಡಿಸಿದ್ದು, ಜೂನ್ 1ಕ್ಕೆ 6 ವರ್ಷ ಪೂರ್ಣಗೊಂಡಿರುವ ಮಗು ನೇರವಾಗಿ ಒಂದನೇ ತರಗತಿಗೆ ದಾಖಲಾತಿ ಮಾಡಬಹುದಾಗಿದೆ ಎಂದು ವರದಿಯಾಗಿದೆ.