ಕಾರವಾರ: ಕೆಲಸ ಕೊಡಿಸುವುದಾಗಿ ಆನ್ ಲೈನ್ ಆಪ್ ಮೂಲಕ ಸುಮಾರು 86.99 ಸಾವಿರ ರೂಪಾಯಿ ವಂಚನೆ ಮಾಡಿದ ಪ್ರಕರಣ ನಗರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಶಿರಸಿ ಮೂಲದ ಕಮಲೇಶ್ ಲಕ್ಷ್ಮಣ ರಾಮ ಪಟೇಲ್ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾನೆ. ಕೆಲಸಕ್ಕಾಗಿ ಹುಡುಕಾಟ ಮಾಡುವಾಗ ಆನ್ ಲೈನ್ ಆಪ್ ಸಿಕ್ಕಿದ್ದು ಅದರಲ್ಲಿ ಕಮಲೇಶ್ ತನ್ನ ಮೊಬೈಲ್ ನಂಬರ್ ಹಾಕಿದ್ದಾನೆ. ಇನ್ನು ಕಮಲೇಶ್ ಮೊಬೈಲ್ ನಂಬರ್ ಪಡೆದ ವಂಚಕರು ವಾಟ್ಸಪ್ ಮೂಲಕ ಆಪ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ನಂಬಿಸಿದ್ದಾರೆ.
ಒಮ್ಮೆ 27 ಸಾವಿರ ಇನ್ನೊಮ್ಮೆ 59.99 ಸಾವಿರ ರೂಪಾಯಿ ಹಣವನ್ನ ವರ್ಗಾವಣೆ ಮಾಡಿದ್ದು ಯಾವುದೇ ಲಾಭ ಸಿಗದೇ ಇದ್ದ ಹಿನ್ನಲೆಯಲ್ಲಿ ಪ್ರಶ್ನಿಸಿದಾಗ ವಂಚನೆ ಮಾಡಿದವರು ಸಂಪರ್ಕಕ್ಕೆ ಸಿಕ್ಕಿಲ್ಲ. ಇನ್ನು ವಂಚನೆಗೊಳಗಾದ ಬಗ್ಗೆ ಕಮಲೇಶ್ ಗೆ ತಿಳಿದ ಹಿನ್ನಲೆಯಲ್ಲಿ ಸಿ.ಇ.ಎನ್ ಠಾಣೆಗೆ ಬುಧವಾರ ಬಂದು ದೂರನ್ನ ದಾಖಲಿಸಿದ್ದಾನೆ.