ಕಾರವಾರ: ಅಂಕೋಲಾ ಹಾಗೂ ಕಾರವಾರ ತಾಲೂಕುಗಳಲ್ಲಿ ಗಾಂಧಿ ಪಥ ಗ್ರಾಮ ಪಥ ಯೋಜನೆಯಡಿಯಲ್ಲಿ ಸುಮಾರು 62 ಕೋಟಿ ರೂ. ಮೊತ್ತದ 35.0 ಕಿ.ಮೀ. ರಸ್ತೆಗಳ ಪೈಕಿ ಮಾಜಾಳಿ ಬಾವಳದಲ್ಲಿ ಮೊದಲ ಕಾಮಗಾರಿಗೆ ಶಾಸಕ ಸತೀಶ ಸೈಲ್ ಅವರು ಚಾಲನೆ ನೀಡಿದರು.
ಚಿತ್ತಾಕುಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಹೆಯಿಂದ ಜಗಾವಾಡಾ-ಪಿಂಪಳಕಟ್ಟಾ ರಸ್ತೆ ಕಾಮಗಾರಿಗೆ ಗುದ್ದಲಿ ಪೂಚೆ ನೆರವೇರಿಸುವ ಮೂಲಕ ನೀಡಿ, ರಸ್ತೆ ಕಾಮಗಾರಿಯ ಮೊತ್ತ 126.7 ಲಕ್ಷಗಳಾಗಿದ್ದು, 1 ಕಿ.ಮೀ.ವರೆಗೂ ರಸ್ತೆಯು ಕಾಂಕ್ರೀಟಿಕರಣವಾಗಲಿದೆ ಎಂದರು.
ಕರಾವಳಿ ಭಾಗದ ಕಾರವಾರ-ಅಂಕೋಲಾ ಮತಕ್ಷೇತ್ರದಲ್ಲಿ ಅತೀವ ಮಳೆಯಿಂದಾಗಿ ಡಾಂಬರೀಕರಣ ರಸ್ತೆಗಳು ಬಹುಬೇಗನೆ ಹಾಳಾಗುತ್ತಿರುವ ಕಾರಣ ಯೋಜನೆಯ ಎಲ್ಲಾ ರಸ್ತೆಗಳನ್ನು ಕಾಂಕ್ರೀಟೀಕರಣ ಮಾಡಲು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದೆ ಮತ್ತು ಅದರಂತೆ ಸರ್ಕಾರದಿಂದ ಎಲ್ಲಾ ರಸ್ತೆಗಳ ಕಾಂಕ್ರೀಟಿಕರಣದ ಅಂದಾಜು ಪಟ್ಟಿ ಅನುಮೋದಿತವಾಗಿದೆ.
ಈ ರಸ್ತೆಯ ಗುತ್ತಿಗೆಯನ್ನು ಮಹಾರಾಷ್ಟ್ರದ ಈಗಲ್ ಇನ್ಫ್ರಾ ಕಂಪನಿ ಪಡೆದುಕೊಂಡಿದ್ದು ಕಾಮಗಾರಿಯ ಗುಣಮಟ್ಟದಲ್ಲಿ ನಡೆಯುವಂತೆ ಸ್ಥಳೀಯರು ಆಸಕ್ತಿ ವಹಿಸಬೇಕೆಂದು ಕಾಮಗಾರಿಯು ಐದು ವರ್ಷಗಳ ನಿರ್ವಹಣೆಯನ್ನು ಸಹ ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಪಂಡರಿನಾಥ ಮೇತಾ, ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಕೆಡಿಎ ಮಾಜಿ ಅಧ್ಯಕ್ಷರಾದ ಶಂಭು ಶೆಟ್ಟಿ, ಗ್ರಾಪಂ ಅಧ್ಯಕ್ಷ ರಾಜು ತಾಂಡೇಲ, ಸದಸ್ಯರಾದ ವಿಜಯ ದೇಸಾಯಿ, ಸೂರಜ್ ದೇಸಾಯಿ, ಸೈರಾಭಾನು, ಗಾಯತ್ರಿ ಉಲ್ಲಾಸ ಕದಂ, ಮಂಜುನಾಥ ನಾಯ್ಕ ಮತ್ತು ಸ್ಥಳೀಯರಾದ ಶಿವಾನಂದ ರಾಣೆ, ಡಾ.ಗಜೇಂದ್ರ ನಾಯ್ಕ, ದತ್ತು ನಾರಾಯಣ ನಾಯ್ಕ, ಅಪ್ಪಾಜಿ ನಾಯ್ಕ, ಕಿಶೋರ ರಾಣೆ, ರವಿ ದೇಸಾಯಿ, ಪಂಡರಿ ನಾಯ್ಕ, ಸಮೀರ ನಾಯ್ಕ, ಗುತ್ತಿಗೆ ಕಂಪನಿಯಾದ ಈಗಲ್ ಇನ್ಫ್ರಾರವರ ದಿನೇಶ ಧನವಾನಿ ಮತ್ತು ಸಾರ್ವಜನಿಕರು, ಪಿಎಂಜಿಎಸ್‍ವಾಯ್ ಸಹಾಯಕ ಎಂಜಿನಿಯರ್  ರಾಜೀವ ನಾಯ್ಕ ಇದ್ದರು.

RELATED ARTICLES  ಅಮೃತಧಾರಾ ಗೋಶಾಲೆಗೆ ಒಂದು ಲಕ್ಷ ರೂ ಸಮರ್ಪಿಸಿದ ಪರಮಯ್ಯ ಹೆಗಡೆ