ಅಂಕೋಲಾ : ಪಿಎಂ ಜೂನಿಯರ್ ಕಾಲೇಜಿನಲ್ಲಿ ಕಳೆದ 17 ವರ್ಷಗಳಿಂದ ಇತಿಹಾಸ ವಿಭಾಗದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಾಸರೆ ಗ್ರಾಮದ ನಿವಾಸಿ ಅರವಿಂದ ಬೀರಾ ಆಗೇರ ರಾ. ಹೆ. 66 ರ ಬೆಳಸೆ ಪಂಚಾಯತ ಎದುರು ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ವರದಿಯಾಗಿದೆ.
ತನ್ನ ಮನೆಯಿಂದ ಕಾಲೇಜಿಗೆ ಬರುತ್ತಿರುವಾಗ ದಾರಿ ಮಧ್ಯೆ ಹೆದ್ದಾರಿಯಲ್ಲಿ ಅದಾವುದೋ ಕಾರಣದಿಂದ ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಖಾಸಗಿ ವಾಹನದಲ್ಲಿ ತಾಲೂಕಾ ಆಸ್ಪತ್ರೆಗೆ ಕರೆತಂದರಾದರೂ ತಲೆಮತ್ತಿತರ ಭಾಗಗಳಿಗೆ ಆಗಿರಬಹುದಾದ ಗಂಭೀರ ಗಾಯಗಳಿಂದ ಅದಾಗಲೇ ಅರವಿಂದ ಕೊನೆಯುಸಿರೆಳದಿದ್ದಾರೆ ಎನ್ನಲಾಗಿದೆ.