ಕುಮಟಾ : ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯಕಾರಿ ಸದಸ್ಯ ಪ್ರವೀಣ ನೆಟ್ಟಾರ ಅವರನ್ನು ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಪದಾಧಿಕಾರಿಗಳು ಆರಂಭಿಸಿರುವ ರಾಜೀನಾಮೆ ಪರ್ವ ಈಗ ರಾಜ್ಯಾದ್ಯಂತ ವ್ಯಾಪಕತೆ ಪಡೆಯುತ್ತಿದೆ. ಒಂದು ಜಿಲ್ಲೆಯ ನಂತರ ಮತ್ತೊಂದು ಜಿಲ್ಲೆಯ ಯುವ ಪದಾಧಿಕಾರಿಗಳು ರಾಜೀನಾಮೆಗೆ ಮುಂದಾಗಿದ್ದಾರೆ.
ಇದೀಗ ಕುಮಟಾದಲ್ಲಿಯೂ ಯುವ ಮೋರ್ಚಾ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸುತ್ತಿದ್ದು ಮೋರ್ಚಾದ ಅಧ್ಯಕ್ಷರಾದ ಜಗದೀಶ ಎಸ್ ಭಟ್ಟ ರಾಜೀನಾಮೆ ಸಲ್ಲಿಸಿ ಮಂಡಲ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇದು ಜಿಲ್ಲೆಯ ಮೊದಲ ರಾಜಿನಾಮೆ ಎಂದು ಉಲ್ಲೇಖಿತವಾಗಿದೆ.
ದಿನಾಂಕ 21.07.2022 ರಂದು ಸೂಳ್ಯದ ಜಿಲ್ಲಾ ಬಿಜೆಪಿ ಯುವಮೋರ್ಚದ ಪಧಾದಿಕಾರಿಯಾಗಿದ್ದ ಪ್ರವೀಣ ನೆಟ್ಟಾರು ಅವರ ಹತ್ಯೆಯಾಗಿದ್ದು ಇದು ನಮ್ಮ ಯುವಮೋರ್ಚಾ ಪಧಾದಿಕಾರಿಗಳ ಮನಸ್ಸಿಗೆ ಬಹಳ ನೋವನ್ನುಂಟು ಮಾಡಿರುತ್ತದೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿ ಪ್ರವೀಣ ನೆಟ್ಟೂರು ಅವರ ಸಾವಿಗೆ ನ್ಯಾಯ ಒದಗಿಸಿ ಕೊಡುವಲ್ಲಿ ಸರ್ಕಾರ ತನ್ನ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಆದರೆ ಇಂತಹ ಘಟನೆಗಳು ಮರುಕಳಿಸಿತ್ತುರುವುದರಿಂದ ನಾವು ಮನನೊಂದು ಸಹಮತದಿಂದ ರಾಜೀನಾಮೆ ನೀಡಲು ತೀರ್ಮಾನಿಸಿರುತ್ತೇವೆ. ಕಾರಣ ಮಾನ್ಯರಾದ ತಾವು ನಮ್ಮ ರಾಜೀನಾಮೆಯನ್ನು ಅಂಗೀಕರಿಸಬೇಕಾಗಿ
ಸವಿನಯವಾಗಿ ವಿನಂತಿಸಿಕೊಳ್ಳುತ್ತೇವೆಂದು ಅವರು ತಿಳಿಸಿದ್ದಾರೆ.