ಕುಮಟಾ : ವಿಧಾತ್ರಿ ಅಕಾಡೆಮಿಯವರು ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಜೊತೆಗೆ ಒಡಂಬಡಿಕೆ ಮಾಡಿಕೊಂಡು ನಡೆಸುತ್ತಿರುವ ಸರಸ್ವತಿ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಇಂದು ಪ್ರಕಟವಾದ ಸಿ.ಇ.ಟಿ ಫಲಿತಾಂಶದಲ್ಲಿ ಅತ್ಯುತ್ತಮ ಸ್ಥಾನಗಳನ್ನು ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ಎಂಜನೀಯರಿಂಗ್, ಅಗ್ರಿಕಲ್ಚರ್, ಬಿ.ಎನ್.ವಾಯ್.ಎಸ್, ವೆಟರ್ನರಿ ವಿಭಾಗದಲ್ಲಿ ಅತ್ಯುತ್ತಮ ಶ್ರೇಣಿಯ ರ‍್ಯಾಂಕ್ ಗಳಿಸಿರುತ್ತಾರೆ. ನಮ್ಮ ಹೆಮ್ಮೆಯ ವಿದ್ಯಾರ್ಥಿಗಳಾದ ಪ್ರಜ್ವಲ್ ಜಿ. ಪಟಗಾರ ಎಂಜನೀಯರಿಂಗ್ ವಿಭಾಗದಲ್ಲಿ ೯೩೬ ನೇ ರ‍್ಯಾಂಕ್ ಹಾಗೂ ಅಗ್ರಿಕಲ್ಚರ್ ವಿಭಾಗದಲ್ಲಿ ೧೨೯೮ ನೇ ರ‍್ಯಾಂಕ್, ಪವನ ಎಚ್. ಭಕ್ತ, ಅಗ್ರಿಕಲ್ಚರ್ ವಿಭಾಗದಲ್ಲಿ ೬೩೭ ನೇ ರ‍್ಯಾಂಕ್ ಹಾಗೂ ಎಂಜನೀಯರಿಂಗ್ ವಿಭಾಗದಲ್ಲಿ ೧೫೪೦ ನೇ ರ‍್ಯಾಂಕ್ ಪವನ ಎ. ಶಾನಭಾಗ ಎಂಜನೀಯರಿಂಗ್ ವಿಭಾಗದಲ್ಲಿ ೧೫೬೩ ನೇ ರ‍್ಯಾಂಕ್. ಹಾಗೂ ಶ್ರವಣ ಎಮ್. ಪೈ ಅಗ್ರಿಕಲ್ಚರ್ ವಿಭಾಗದಲ್ಲಿ ೧೭೬೫ ನೇ ರ‍್ಯಾಂಕ್ ಪಡೆದು ೨೦೦೦ ಒಳಗಿನ ರ‍್ಯಾಂಕಿಂಗ್ ನಲ್ಲಿ ತಮ್ಮ ಹೆಸರು ನಮೂದಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಅದೆ ರೀತಿ ೫೦೦೦ ರ‍್ಯಾಂಕ್ ಒಳಗಡೆ ಫ್ರಾನ್ಸಿಸ್ ಫರ್ನಾಂಡಿಸ್, ನಮಿತಾ ಭಟ್, ಪ್ರಥ್ವಿ ಹೆಗಡೆ, ಶಿಲ್ಪಾ ಭಟ್, ಸೂರಜ್ ಶಾನಭಾಗ್, ಗಣಪತಿ ಶಾನಭಾಗ್, ರುಚಿತಾ ನಾಯಕ, ಅನಿರುದ್ಧ ಭಟ್, ದೀಪಿಕಾ ನಾಯಕ, ಇವರುಗಳು ಹಾಗೂ ೧೦೦೦೦ ರ‍್ಯಾಂಕ್ ಒಳಗಡೆ ಒಟ್ಟು ೩೬ ವಿದ್ಯಾರ್ಥಿಗಳು ತಮ್ಮ ಹೆಸರು ನಮೂದಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಹೊಸದೊಂದು ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ವಿಧಾತ್ರಿ ಅಕಾಡೆಮಿ ಸರಸ್ವತಿ ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅತ್ಯುತ್ತಮ ರೀತಿಯಲ್ಲಿ ಅಣಿಗೊಳಿಸಿರುವುದಕ್ಕೆ ಇದು ಸಾಕ್ಷಿ ಎನ್ನುವಂತಿದೆ ಎಂದು ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ವಿಧಾತ್ರಿ ಅಕಾಡಮಿಯ ಮುಖ್ಯಸ್ಥರಾದ ಶ್ರೀ ಗುರುರಾಜ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಕಿರಣ ಭಟ್ಟ ಮತ್ತು ಉಪನ್ಯಾಸಕರು, ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರು, ಕಾರ್ಯದರ್ಶಿಗಳು, ವಿಶ್ವಸ್ಥರು, ಸಂಸ್ಥೆಯ ಶಿಕ್ಷಕರು ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.