ಭಟ್ಕಳ: ವರುಣನ ಆರ್ಭಟಕ್ಕೆ ಭಟ್ಕಳಿಗರು ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮುಟ್ಟಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮನೆಯ ಮೇಲೆ ಗುಡ್ಡಕುಸಿದ ಪರಿಣಾಮ ನಾಲ್ವರು ಮನೆಯಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯಗಿದೆ.
ಕೇರಿಪಾಲ್ ನಾರಾಯಣ ಎಂಬ ಮನೆಯ ಮೇಲೆ ಗುಡ್ಡ ಕುಸಿದ ಹಿನ್ನೆಲೆ ಮನೆ ಸಂಪೂರ್ಣ ನೆಲಸಮವಾಗಿದ್ದು ಮನೆಯಲ್ಲಿದ್ದ ನಾಲ್ವರು ಸಿಲಿಕಿಕೊಂಡಿರುವುದಾಗಿ ವರದಿಯಾಗಿದೆ.