ಕೇರಳದಲ್ಲಿ ಮಂಕಿ ಪಾಕ್ಸ್ ಪ್ರಕರಣ ಜನತೆಗೆ ಹಾಗೂ ಸರಕಾರಕ್ಕೆ ತಲೆನೋವು ತಂದಿದ್ದು, ಒಂದೊಂದೇ ಪ್ರಕರಣಗಳು ಹೊರ ಬರುತ್ತಿದೆ. ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಂಕಿಪಾಕ್ಸ್ ಪ್ರಕರಣವನ್ನು ಖಚಿತಪಡಿಸಿದ್ದು, ಎಮಿರೇಟ್ಸ್‍ನಿಂದ ಜು.22ರಂದು ಆಗಮಿಸಿರುವ 30 ವರ್ಷದ ಮಲಪುರಂ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿದೆ.

ಈ ವ್ಯಕ್ತಿ ಕಾಚಿಕೋಡ ವಿಮಾನ ನಿಲ್ದಾಣದಿಂದ ಆಗಮಿಸಿದ್ದು, ಅವರ ಜೊತೆ ನಿಟಕ ಸಂಪರ್ಕ ಹೊಂದಿರುವವರ ಮೇಲೆ ನಿಗಾ ಇಡಲಾಗಿದೆ. ಮಲ್ಲಾಪುರಂ ಮಂಜರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಕೇರಳದಲ್ಲಿ ಒಟ್ಟು 5 ಮಂದಿ ಮಂಕಿಪಾಕ್ಸ್‍ಗೆ ಸಿಲುಕಿದಂತಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.

RELATED ARTICLES  ಭೀಕರ ಅಪಘಾತ : ಸ್ಥಳದಲ್ಲಿಯೇ ಓರ್ವ ಸಾವು.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುವ ಅಪರೂಪದ ಕಾಯಿಲೆಯಾಗಿದೆ. ಮಂಕಿಪಾಕ್ಸ್ ವೈರಸ್ ಪಾಕ್ಸ್ವಿರಿಡೆ ಕುಟುಂಬದಲ್ಲಿ ಆರ್ಥೋಪಾಕ್ಸ್ ವೈರಸ್ ಕುಲಕ್ಕೆ ಸೇರಿದೆ. ಆರ್ಥೋಪಾಕ್ಸ್ ವೈರಸ್ ಕುಲವು ವೆರಿಯೊಲಾ ವೈರಸ್ (ಸಿಡುಬುಗೆ ಕಾರಣವಾಗುತ್ತದೆ), ವ್ಯಾಕ್ಸಿನಿಯಾ ವೈರಸ್ ( ಮತ್ತು ಕೌಪಾಕ್ಸ್ ವೈರಸ್ ಅನ್ನು ಸಹ ಒಳಗೊಂಡಿದೆ.

ಸೆಂಟರ್ ಫಾರ್ ಡಿಸೀಸ್ ಅಂಡ್ ಕಂಟ್ರೋಲ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಮಾನವರಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಚಿಕನ್‌ಪಾಕ್ಸ್‌ನಂತೆಯೇ ಇರುತ್ತವೆ, ಆದರೆ ಸೌಮ್ಯವಾಗಿರುತ್ತವೆ ಮತ್ತು ಜ್ವರ, ತಲೆನೋವು, ಸ್ನಾಯು ನೋವು ಮತ್ತು ಆಯಾಸದಿಂದ ಸೋಂಕಿನ ನಂತರ 7-14 ದಿನಗಳ ನಂತರ ಪ್ರಾರಂಭವಾಗುತ್ತದೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ ಮತ್ತು ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು.

RELATED ARTICLES  ಭಾಗವತ್ ಆಸ್ಪತ್ರೆಯಲ್ಲಿ ಸೇವೆ ಪ್ರಾರಂಭಿಸುತ್ತಿರುವ ಡಾ. ಸುಮಂತ್ ಬಳಗಂಡಿ

ಮಂಕಿಪಾಕ್ಸ್ ಕಾಯಿಲೆಯನ್ನು ತಪ್ಪಿಸುವುದು ಹೇಗೆ?
* ಮಂಕಿಪಾಕ್ಸ್‌ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳುವುದು.
* ಮಂಕಿಪಾಕ್ಸ್‌ನ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯ ಟವೆಲ್‌ಗಳು ಅಥವಾ ಬಟ್ಟೆಗಳಂತಹ ವೈಯಕ್ತಿಕ ವಸ್ತುಗಳನ್ನು ಮುಟ್ಟಬೇಡಿ.
* ಆಗಾಗ್ಗೆ ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆಯಿರಿ ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಸಿ.
* ಮಂಗನ ಕಾಯಿಲೆಯ ಲಕ್ಷಣಗಳು ಕಂಡುಬಂದರೆ, ಮನೆಯಲ್ಲಿಯೇ ಇರಿ.
* ಈ ಸಂದರ್ಭದಲ್ಲಿ ನಿಮ್ಮ ಸಾಕುಪ್ರಾಣಿಗಳಿಂದಲೂ ಅಂತರ ಕಾಯ್ದುಕೊಳ್ಳಿ.