ಅಂಕೋಲಾ : ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಲೇ ಇದ್ದು , ಕಾನೂನನ್ನು ಕಠಿಣ ಮಾಡಿದ್ದರೂ ಇನ್ನು ಸಹ ಅಂತಹ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದೀಗ ಮಹಿಳೆಯೊಬ್ಬಳು ಸ್ನಾನಮಾಡುವಾಗ, ಇಣುಕಿ ನೋಡಿ ವಿಡಿಯೋ ಮಾಡಿದ ಆರೋಪದ ಮೇಲೆ ವ್ಯಕ್ತಿಯೊರ್ವನನ್ನು ಬಂದಿಸಿರುವ ಘಟನೆ ತಾಲೂಕಿನ ಗಾಬಿತಕೇಣಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮಾರುತಿ (34) ಕೇಣಿ ಎಂಬಾತನೇ ಆರೋಪಿಯಾಗಿದ್ದು ಈತ ತನ್ನೂರಿನ ಪಕ್ಕದ ಗ್ರಾಮಕ್ಕೆ ಹೋಗಿ ಬೆಳಗಿನ ಜಾವ ಅಲ್ಲಿನ ಮನೆಯೊಂದರ ಹೊರಗಿನ ಕಂಪೌಂಡ ಗೋಡೆ ಹತ್ತಿ, ಪಕ್ಕದಲ್ಲೇ ಇರುವ ಸ್ನಾನ ಗೃಹದಲ್ಲಿ (ಕಚ್ಚಾ ಬಾತರೂಂ ) ಇಣುಕಿ ನೋಡಿ ಅಲ್ಲಿ ಸ್ನಾನ ಮಾಡುತ್ತಿದ್ದ ವಿಡಿಯೋ ಮಾಡಿದ ಪ್ರಕರಣದ ಬಗ್ಗೆ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಗಾಬಿತವಾಡಾದಲ್ಲಿರುವ ತನ್ನ ಮನೆಯಲ್ಲಿ ಮಹಿಳೆಯೊಬ್ಬಳು ಸ್ನಾನ ಮಾಡುತ್ತಿರುವಾಗ, ಬಾತರೂಂ ಹತ್ತಿರದ ಕಪೌಂಡ ಮೇಲೆ ಹತ್ತಿ, ಸ್ನಾನ ಮಾಡುತ್ತಿರುವದನ್ನು ಇಣುಕಿ ನೋಡಿದಲ್ಲದೇ, ವಿಡಿಯೋ ಮಾಡುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ. ಪಿಎಸೈ ಪ್ರವೀಣಕುಮಾರ ಹಾಗೂ ಮಹಾಂತೇಶ ಅವರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಪೊಲೀಸ್ ತನಿಖೆಯ ನಂತರದಲ್ಲಿ ಸಂಪೂರ್ಣ ಮಾಹಿತಿ ಹೊರ ಬರಬೇಕಿದೆ.
ಉತ್ತರ ಕನ್ನಡದ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ. https://chat.whatsapp.com/0cRQLIlSqAI3wkR6BDBBdh