ಮುಂಡಗೋಡ: ಆಗಸ್ಟ್ 6 ರಂದು ಇಂಗ್ಲೆಂಡ್‌ದ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕೂಟದಲ್ಲಿ ತಾಲೂಕಿನ ಲಕ್ಕೊಳ್ಳಿ ಗ್ರಾಮದ ಎನ್.ಎಸ್.ಸಿಮಿ 4*100 ಮೀ ರಿಲೇ ತಂಡವನ್ನು ಪ್ರತಿನಿಧಿಸುತ್ತಿದ್ದಾಳೆ ಎಂದು ತಿಳಿದುಬಂದಿದೆ.

ಇವಳು ಈಗಾಗಲೇ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿ ಮುಂಡಗೋಡ ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಸಿಮಿಯವರು ಸದ್ಯ ಇಂಗ್ಲೆಂಡ್
ಬರ್ಮಿಂಗ್ಹ್ಯಾಮ್‌ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ ಎನ್ನಲಗಿದೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು

ನಮ್ಮ WhatsApp ಗ್ರುಪ್ ಸೇರಿ ನ್ಯೂಸ್ ಅಪ್ಡೇಟ್ ಪಡೆಯಲು ಈ ಲಿಂಕ್ ಒತ್ತಿ https://chat.whatsapp.com/0cRQLIlSqAI3wkR6BDBBdh

ಈಗಾಗಲೇ ದೇಶಕ್ಕೆ ಐದು ಪದಕ ದೊರಕಿದೆ.
ರಿಲೇಯಲ್ಲಿಯೂ ಸಿಮಿ ಪ್ರತಿನಿಧಿಸುವ ತಂಡ ವಿಜೇತರಾಗಿ ದೇಶ, ರಾಜ್ಯ ಮತ್ತು ಜಿಲ್ಲೆಯ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ತರುವಂತಾಗಲಿ ಎಂದು ತಾಲೂಕಿನ ಜನತೆ ಶುಭ ಹಾರೈಸುತ್ತಿದ್ದಾರೆ. ಅಗಷ್ಟೇ 8 ರವರೆಗೆ ಕಾಮನ್‌ವೆಲ್ತ್‌ಕೂಟ ನಡೆಯಲಿದೆ ಎಂದು ವರದಿಯಾಗಿದೆ.

RELATED ARTICLES  ಡಿ.ವೈ.ಎಸ್.ಪಿ. ಹುದ್ದೆಗೆ ಏರುವ ಮೂಲಕ ಸಾಧನೆ.