ಭಟ್ಕಳ : ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಭಟ್ಕಳ ತಾಲೂಕಿನ ಶಿರಾಲಿ, ಶಾರದಹೊಳೆ, ಕೋಟೆಬಾಗಿಲು, ಮೂಡಶಿರಾಲಿಯಲ್ಲಿ ನೀರು ನುಗ್ಗಿರುವ ಅಂಗಡಿ ಮುಂಗಟ್ಟುಗಳು, ಮನೆ, ಅಂಗನವಾಡಿ, ಶಾಲೆಗಳಿಗೆ ಭೇಟಿ ನೀಡಿ, ಭಟ್ಕಳ ತಾಲೂಕು ಸಹಾಯಕ ಆಯುಕ್ತರ ಕಚೇರಿಯಲ್ಲಿ ಭಟ್ಕಳದ ಎಲ್ಲಾ ಪಂಚಾಯತ್ ಅಧ್ಯಕ್ಷರ ಅಧಿಕಾರಗಳ ಸಭೆ ನಡೆಸಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಅಗತ್ಯ ದಾಖಲೆಗಳನ್ನು ನ್ಯಾಯುತವಾಗಿ ಕಲೆಹಾಕಿ ಬಡವರಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಮಾನ್ಯ ಕಾರ್ಮಿಕ ಇಲಾಖೆ ಸಚಿವರಾದ ಶ್ರೀ ಶಿವರಾಮ್ ಹೆಬ್ಬಾರ್ ಅವರು ಹಾಗೂ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು
ಮಂಗಳವಾರ ಮುಂಜಾನೆ ಗುಡ್ಡ ಕುಸಿದು ಅವಘಡಕ್ಕೀಡಾದ ಭಟ್ಕಳ ತಾಲೂಕಿನ ಮುಠ್ಠಳ್ಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಹಾಗೂ ಶೀಘ್ರ ಪರಿಹಾರ ಕ್ರಮಗಳನ್ನು ಕೈಗೊಳ್ಳುಲು ಪ್ರಕೃತಿ ವಿಕೋಪ ಸಂಭವಿಸಬಹುದಾದ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಆಲ್ಲದೆ, ತೀವ್ರ ಮಳೆಗೆ ಹಾನಿಗೊಳಗಾದ ತಾಲೂಕಿನ ಮುಂಡಳ್ಳಿ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು.
ಸಂಜೆ 4 ಘಂಟೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಭಟ್ಕಳಕ್ಕೆ ಭೇಟಿ ನೀಡಲಿದ್ದು ಪ್ರವಾಹಪರಿಸ್ಥಿಯನ್ನು ವೀಕ್ಷಿಸಲಿದ್ದಾರೆ. ಕಾರಣ ಎಲ್ಲಾ ಅಧಿಕಾರಿಗಳು ಭಟ್ಕಳ ತಾಲೂಕಿನಲ್ಲಿ ನೆರೆಹಾವಳಿಯಿಂದಾಗಿ ಆದ ಅನಾಹುತದ ಸಂಪೂರ್ಣ ಮಾಹಿತಿಯೊಂದಿಗೆ ಸಿಧ್ಧರಿರುವಂತೆ ಶಾಸಕ ಸುನೀಲ್ ನಾಯ್ಕ ಸೂಚಿಸಿದರು.