ಶಿರಸಿ : ಕಳೆದ ಜುಲೈ 30 ರಂದು ಶಿವ ಗಂಗಾ ಫಾಲ್ಸ್ ನಲ್ಲಿ ಕಾಲು ಜಾರಿ ಬಿದ್ದು ಕಾಣೆಯಾಗಿದ್ದ ತ್ರಿವೇಣಿ ಅಂಬಿಗ ಇವಳ ಪತ್ತೆ ಕಾರ್ಯಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಇದುವರೆಗೂ ತ್ರಿವೇಣಿಯ ಸುಳಿವು ಪೋಲಿಸರಿಗೆ ದೊರೆತ್ತಿಲ್ಲ. ತ್ರಿವೇಣಿ ಪತ್ತೆಗಾಗಿ ಚಿತ್ತದುರ್ಗದ ಕೋತಿರಾಜ್ ತಂಡವನ್ನು ಶೋಧ ಕಾರ್ಯಕ್ಕೆ ಕರೆಸಲಾಗಿದೆಯಲ್ಲದೇ ದ್ರೋಣ್ ಕ್ಯಾಮರ ಮೂಲಕವು ಕೂಡಾ ಪತ್ತೆ ಕಾರ್ಯಚರಣೆ ನಡೆಸಲಾಗುತ್ತಿದೆ.
ತ್ರಿವೇಣಿ ಕಾಲು ಜಾರಿ ಬಿದ್ದ ಮೊದಲ ದಿನದಿಂದಲೇ ಪೋಲಿಸ್,ಅಗ್ನಿ ಶಾಮಕ ದಳದ ಜೊತೆಗೆ ಸ್ಥಳೀಯ ಲೈಫ್ ಗಾರ್ಡ ಮುಖ್ಯಸ್ಥ ಗೋಪಾಲ ಗೌಡಾ ತಂಡದ 15 ಸದಸ್ಯರು ಹಾಗು ಜಡ್ಡಿಗದ್ದೆ ಗ್ರಾಮದ ವೆಂಕಟರಮಣ ಪೂಜಾರಿ ನೇತ್ರತ್ವದ 25 ರಿಂದ 30 ಸದಸ್ಯರು ಕಾರ್ಯಚರಣೆ ನಡೆಸುತ್ತಿದ್ದಾರೆ.