ಹೊನ್ನಾವರ : ತಾಲೂಕಿನ ಕಡತೋಕಾದ ಶ್ರೀ ಸ್ವಯಂಭೂ ದೇವ ದೇವಾಲಯದ ಧರ್ಮದರ್ಶಿಗಳಾದ ಪ.ಪೂ.ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ಇದೇ ಶುಭಕೃತ್ ಸಂವತ್ಸರದ ಶ್ರಾವಣ ಶುಕ್ಲ ತ್ರಯೋದಶಿ ಬುಧವಾರ (ದಿನಾಂಕ 10,ಆಗಸ್ಟ್ 2022)ಬೆಳಿಗ್ಗೆ 9 ಗಂಟೆಯಿಂದ ಶ್ರೀ ದೇವಾಲಯದಲ್ಲಿ ಈ ವರ್ಷದ ಶ್ರಾವಣೋತ್ಸವವನ್ನು ನೆರವೇರಿಸಲಾಗುವುದು. ಲೋಕ ಕಲ್ಯಾಣಕ್ಕಾಗಿ ದೇವತಾ ಪ್ರಾರ್ಥನೆ,ಕಲಶ ಸ್ಥಾಪನೆಯೊಂದಿಗೆ ರುದ್ರ ಪಠಣ,ರುದ್ರ ಹವನ,ಸಪ್ತಶತಿ ಪಾರಾಯಣ,ಕ್ಷೀರಾಭಿಷೇಕ,ಮಹಾ ಪೂಜೆ,ಪ್ರಸಾದ ಭೋಜನ ಸಾಯಂಕಾಲ ಪ್ರದೋಷ ಪೂಜೆ,ಪ್ರಸಾದ ವಿತರಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು.
ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 4.30 ರಿಂದ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ಹೆಬ್ಬಳೇಕೆರಿ ಇವರಿಂದ ಭಜನಾ ಕಾರ್ಯಕ್ರಮ. ಇದೇ ಸಂದರ್ಭದಲ್ಲಿ ಈ ವರ್ಷದ ಪಿಯೂಸಿ ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ ಜಿಲ್ಲೆಗೆ ಮೂರನೇ ರ್ಯಾಂಕ್ ಹಾಗೂ ಹೊನ್ನಾವರ ತಾಲೂಕಿಗೆ ಪ್ರಥಮ ರ್ಯಾಂಕ್ ಪಡೆದ ಕು.ಕುಮಾರ ವಿಘ್ನೆಶ್ವರ ಶ್ಯಾನಭಾಗ ಈತನಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಕುಳಾವಿಗಳಿಂದ,ಭಕ್ತರಿಂದ ನಗದು ಹಾಗೂ ಸುವಸ್ತುಗಳನ್ನು ಸ್ವೀಕರಿಸಲಾಗುವುದು.ಬ್ಯಾಂಕ್ ದ್ವಾರಾ ಹಣ ಸಂದಾಯ ಮಾಡುವವರು “ಶ್ರೀ ಸ್ವಯಂಭೂ ದೇವ ಸೇವಾ ಸಮಿತಿ,ಕಡತೋಕಾ”ಹೆಸರಿಗೆ ಕೆನರಾ ಬ್ಯಾಂಕ್ ಕಡತೋಕಾ ಎಸ್. ಬಿ ಅಕೌಂಟ್ ನಂಬರ್ 03232200004026
IFSC No CNRB0010323 MICR Code 581015607 ಕ್ಕೆ ಜಮಾ ಮಾಡಬಹುದಾಗಿದೆ. ರುದ್ರ ಪಠಣ ಹಾಗೂ ಕುಂಕುಮಾರ್ಚನೆ ಸೇವೆ ನಡೆಯಲಿದ್ದು ಭಕ್ತಾದಿಗಳು ಭಾಗವಹಿಸಿ ಸೇವಾಭಾಜನರಾಗಿ. ತಾವೆಲ್ಲರೂ ಅವಶ್ಯ ಬಂದು ಪ್ರಸಾದ ಸ್ವೀಕರಿಸಿ ಶ್ರೀ ದೇವರ ಹಾಗೂ ಶ್ರೀ ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಸ್ವಯಂಭೂ ದೇವ ಸೇವಾ ಸಮಿತಿಯ ಪರವಾಗಿ. ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ 08387200620 8970055722