ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, ಹೀಗಾಗಿ ಮುಖ್ಯಮಂತ್ರಿಗಳ ದೆಹಲಿ ಪ್ರವಾಸ ರದ್ದಾಗಿದೆ.
ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ನನ್ನ ದೆಹಲಿಯ ಪ್ರವಾಸ ರದ್ದಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES  ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು.

ಅವರು ಇಂದು ಸಂಜೆ ಸಂಜೆ ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಭಾಗಿಯಾಗಬೇಕಿತ್ತು. ಅಲ್ಲದೆ, ನಾಳೆ ಶನಿವಾರ ನೀತಿ ಆಯೋಗದ ಸಭೆಯಲ್ಲಿಯೂ ಭಾಗಿಯಾಗಬೇಕಿತ್ತು. ಆದರೆ ಕೋವಿಡ್​ ಸೋಂಕು ಹಿನ್ನೆಲೆಯಲ್ಲಿ ಅವರ ಎಲ್ಲ ಪ್ರವಾಸ ಹಾಗೂ ಕಾರ್ಯಕ್ರಮ ರದ್ದು ಮಾಡಲಾಗಿದೆ. ಬೊಮ್ಮಾಯಿ ಹೋಂ ಕ್ವಾರಂಟೈನ್​​ನಲ್ಲಿದ್ದಾರೆ.

RELATED ARTICLES  ಭಾರತೀಯ ಸಂಸ್ಕøತಿ ಪರಂಪರೆಯ ವರ್ಧಂತಿಗೆ ಶ್ರಮಿಸೋಣ: ರಾಘವೇಶ್ವರಶ್ರೀ