ಭಟ್ಕಳ : ಗುಡ್ಡ ಕುಸಿತ ಸಂಭವಿಸಿ ನಾಲ್ವರು ಮೃತಪಟ್ಟಿದ್ದ ತಾಲೂಕಿನ ಮುಟ್ಟಳ್ಳಿ ಭಾಗದಲ್ಲಿ ಕಳೆದೆರಡು ದಿನದಿಂದ ಮತ್ತೆ ಮಳೆ ಆಗುತ್ತಿದ್ದು ಮತ್ತೆ ಗುಡ್ಡ ಕುಸಿತ ಸಂಭವಿಸುವ ಭೀತಿ ಎದುರಾಗಿದೆ ಎನ್ನಲಾಗಿದೆ. ಆಗಸ್ಟ್‌ 2 ರಂದು ಬೆಳಗಿನ ಜಾವ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಕುಸಿದು ನಾಲ್ವರು ಸಾವಿಗೀಡಾಗಿದ್ದರು. ಈಗ ಅದೇ ಊರಿನಲ್ಲಿ ಗುಡ್ಡದ ಭಾಗ ಮತ್ತೆ ಜಾರಿ ಕೆಳಕ್ಕೆ ಬಂದಿದೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದ್ದು, ಜನರ ಆತಂಕಕ್ಕೆ ಇದು ಕಾರಣವಾಗಿದೆ. ಗುಡ್ಡ ಕುಸಿತದಿಂದಾಗಿ ಗುಡ್ಡದ ಮೇಲ್ಭಾಗದಲ್ಲಿದ್ದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯ ಮಾರ್ಗಕ್ಕೆ ಬದಲಿಸಲಾಗಿದೆ. ಈ ಮಾರ್ಗದ ಮೂಲಕ ಸಬ್ಬತ್ತೆ, ಗೆಂಡೆಮೂಲೆ ಗ್ರಾಮಕ್ಕೆ ತೆರಳುತ್ತಿದ್ದವರಿಗೆ ರೈಲ್ವೇ ಬ್ರಿಡ್ಜ್ ಪಕ್ಕದ ರಸ್ತೆ ಮೂಲಕ ಸಂಚರಿಸುವಂತೆ ಸೂಚನೆ ನೀಡಲಾಗಿದೆ.

RELATED ARTICLES  ಕದಂಬ ನೌಕಾನೆಲೆಯ ಬೋಟ್ ಇಂಜಿನ್ ನಲ್ಲಿ ಬೆಂಕಿ ಅವಘಡ.

ಅಪಾಯ ಗಮನಿಸಿ, ಈಗಾಗಲೇ ಆರು ಮನೆಯವರಿಗೆ ನೋಟೀಸು ನೀಡಿ ಮನೆಯನ್ನು ಖಾಲಿ ಮಾಡಲು ಸೂಚನೆ ನೀಡಲಾಗಿತ್ತು. ಈಗ ಗುಡ್ಡ ಕುಸಿತ ಹಿನ್ನೆಲೆ ಗ್ರಾಮದ ಹತ್ತಕ್ಕೂ ಅಧಿಕ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಸ್ಥಳೀಯ ಆಡಳಿತ ಗುಡ್ಡದ ಭಾಗದಲ್ಲಿ ರಸ್ತೆ ಸಂಚಾರ ಬಂದ್ ಮಾಡಲಾಗಿದೆ ಎಂದು ಹೇಳಲಾಗಿದೆ.

RELATED ARTICLES  ಅರಣ್ಯ ವ್ಯಾಪ್ತಿಯ ಅಡ್ಕಾರಿನಲ್ಲಿ ಅರಣ್ಯ ಇಲಾಖೆ ವತಿಯಿಂದ ತರಬೇತಿ ಭವನ ಉದ್ಘಾಟನೆ.