ಹಳಿಯಾಳ: ಪಟ್ಟಣದಲ್ಲಿ ಸಿಲಿಂಡರ್ ನಿಂದ ಅನಿಲ ಸೋರಿಕೆ ಉಂಟಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ,ಜೊತೆಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಪಟ್ಟಣದ ಅತ್ತಾರ ಆಸ್ಪತ್ರೆ ಪಕ್ಕದ ಈಶ್ವರ ಗಾಣಿಗೇರ ಎಂಬುವರಿಗೆ ಸೇರಿದ್ದ ನಂದಿ ಬಸವೇಶ್ವರ ಲಿಂಗಾಯತ ಖಾನಾವಳಿಯಲ್ಲಿ ನಸುಕಿನ ಜಾವದಲ್ಲಿ ಈ ಘಟನೆ ನಡೆದಿದೆ. ಖಾನಾವಳಿಯಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ ಮಡಿವಾಳರ (42), ಈರಪ್ಪ ಮಡ್ಡಿ (65) ಗಾಯಗೊಂಡವರು ಎನ್ನಲಾಗಿದೆ.

RELATED ARTICLES  ಕಾಣೆಯಾಗಿದ್ದಾರೆ.

ದಿನ ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಿ
ಖಾನಾವಳಿಯಲ್ಲಿಯೇ ರಾತ್ರಿ ಜಗದೀಶ ಹಾಗೂ ಈರಪ್ಪ ನಿದ್ರೆ ಮಾಡುತ್ತಿದ್ದರು. ಸಿಲಿಂಡರಿಂದ ಅನಿಲ ಪೂರೈಕೆಯೂ ಚಾಲ್ತಿಯಲ್ಲಿಯೇ ಇಟ್ಟು ಹಾಗೇ ಮಲಗಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ನಸುಕಿನ ಜಾವದಲ್ಲಿ ಈರಪ್ಪಮಡ್ಡಿ ಅವರು ಬೀಡಿ ಸೇದ ಬೇಕಂದು ಬೆಂಕಿ ಕಡ್ಡಿ ಹೊತ್ತಿಸಿದಾಗ ಬೆಂಕಿ ಎಲ್ಲಾ ಕಡೆ ಆವರಿಸಿಕೊಂಡಿದೆ. ಈರಪ್ಪ ಹಾಗೂ‌ ಜಗದೀಶ ಅವರು ಬೆಂಕಿಗೆ ಕೆನ್ನಾಲಿಗೆಗೆ ಭಾಗಶಃ ಸುಟ್ಟು ಹೋಗಿದ್ದಾರೆ. ಅಲ್ಲದೇ ಖಾನಾವಳಿಯಲ್ಲಿದ್ದ ಕೆಲ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.

RELATED ARTICLES  ಇಬ್ಬರು ಯುವಕರು ನೀರುಪಾಲು : ಯಲ್ಲಾಪುರದಲ್ಲಿ ಘಟನೆ

ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ನೆರವಿಗೆ ಓಡಿ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರು. ತೀವ್ರವಾದ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳ ಸ್ಥಿತಿಯು ಚಿಂತಾಜನಕವಾಗಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕದಲ್ಲಿ ಸಿಬ್ಬಂದಿ, ಪೊಲಿಸ್ ಇಲಾಖೆ, ಭಾರತ್ ಗ್ಯಾಸ್ ಸಿಲಿಂಡರ್ ಏಜೆನ್ಸಿಯವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.