ಶಿರಸಿ: ರಾಯರ ಪೇಟೆ ಮಾಗ೯ವಾಗಿ ಗಾಂಧಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಆಂಜನೇಯ ಸ್ವಾಮಿ ದೇವಸ್ಥಾನ ತಿರುವಿನಲ್ಲಿ ಬೃಹದಾಕಾರದ ಗುಂಡಿ ಬಿದ್ದಿದ್ದು ಇದರಿಂದಾಗಿ ಅನೇಕ ವಾಹನ ಸವಾರರು ಮತ್ತು ಪಾದಚಾರಿಗಳು ಅಪಘಾತ ಸಂಭವಿಸಿ ತೊಂದರೆ ಅನುಭವಿಸಿದ್ದಾರೆ.
ಈ ವಿಷಯ ನಗರಸಭೆ ಸದಸ್ಯ,ಯುವಕರ ಆಶಾಕಿರಣ,ಸಮಾಜ ಸೇವಕ ಶ್ರಿಯುತ ನಾಗರಾಜ ನಾಯ್ಕ ಗಮನಕ್ಕೆ ಬಂದಿದ್ದೆ ಇಂದು ಮುಂಜಾನೆ ಮಳೆಯ ನಡುವಿನಲ್ಲಿ ಯಾರ ಸಹಾಯವು ಇಲ್ಲದೇ ಯಾರಿಗು ತಿಳಿಸದೆ ತಾನೇ ಸ್ವತಃ ತೆರಳಿ ಗುಂಡಿಯನ್ನು ಸಂಪೂರ್ಣ ಮುಚ್ಚುವ ಕಾರ್ಯ ಮಾಡಿ ಆ ಭಾಗದ ಜನರು ಹಾಗು ಶಿರಸಿ ನಾಗರಿಕರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕರೋನ ಸಮಯದಲ್ಲಿ ಇವರ ಜನಸೇವೆ ಶ್ಲಾಘನೀಯವಾಗಿತ್ತು..
ರಾಜಕೀಯ ಕೆಸರಾಟದ ನಡೆಯುವ ಈ ಕಾಲದಲ್ಲಿ ಇಂತಹ ಯುವನಾಯಕ ನಿಜಕ್ಕೂ ನಮ್ಮ ಸಮಾಜಕ್ಕೆ ಮತ್ತು ಯುವ ಸಮೂಹಕ್ಕೆ ತನ್ನ ಕಾಯಕದಿಂದ ಮಾದರಿಯಾಗಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ನಿಮ್ಮ ಜನಪರ ಕಾಳಜಿಯ ಜನಸೇವೆ ನಿಮ್ಮಿಂದಾಗಲಿ, ಜನಪ್ರಿಯತೆ ಗೋಜಿಗೆ ಹೋಗದೆ ತನ್ನ ಕಾಯಕದಿಂದ ಜನಪ್ರೀತಿ ಗಳಿಸುವ ನಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ನಿಮಗೆ ಇನ್ನೂ ಹೆಚ್ಚಿನ ಜನಸೇವೆ ಮಾಡಲು ಶಕ್ತಿ ತಾಯಿ ಮಾರಿಕಾಂಬ ದೇವಿ ಅನುಗ್ರಹಿಸಲಿ ಎಂದು ಜನರು ಹಾರೈಸಿದ್ದಾರೆ.