ಭಟ್ಕಳ : ಮಳೆ ತಕ್ಕಮಟ್ಟಿಗೆ ಕಡಿಮೆಯಾದರೂ ಮಳೆಯಿಂದ ಆಗುವ ಅನಾಹುತಗಳು ಇನ್ನೂ ಸಂಭವಿಸುತ್ತಲೇ ಇದೆ. ಗುಡ್ಡಗುಸಿತದಿಂದಾಗಿ ನಾಲ್ವರು ದುರ್ಮರಣವನ್ನು ಒಪ್ಪಿದ ಸನ್ನಿವೇಶ ಹಸಿಯಾಗಿರುವಾಗಲೇ, ತಾಲೂಕಿನ ಮುಂಡಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡ ಕುಸಿತವಾಗಿರುವ ಬಗ್ಗೆ ವರದಿಯಾಗಿದೆ. ಶಾಲೆಯ ಒಂದು ಪಾರ್ಶ್ವದ ಕೊಠಡಿ ಕುಸಿತವಾಗಿದ್ದು,ಶನಿವಾರ ರಾತ್ರಿ ಕುಸಿದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹಳೆಯ ಕಟ್ಟಡವಾಗಿದ್ದರಿಂದ ಮಳೆಗೆ ನೆಂದು ಕುಸಿದು ಬಿದ್ದರುವುದಾಗಿ ತಿಳಿಸಿದ್ದು ಗೋಡೆ ಜೊತೆ ಮೇಚ್ಛಾವಣಿಯ ಹಂಚು ಸಹ ಬಿದ್ದಿದ್ದು ಸಂಪೂರ್ಣ ಶಿಥಿಲಾವಸ್ತೆ ತಲುಪಿದೆ. ರಾತ್ರಿಯಾದ್ದರಿಂದ ವಿದ್ಯಾರ್ಥಿಗಳು ಪಾರಾಗಿದ್ದಾರೆ. ಶಾಲೆ ನಡೆಯುವ ಸಂದರ್ಭದಲ್ಲಿಯೇ ಈ ದುರ್ಘಟನೆ ಸಂಬಂದಿಸಿದ್ರೆ ಅನೇಕ ಜನರ ಜೀವ ಹಾನಿಗೆ ಇದು ಕಾರಣವಾಗುತ್ತಿತ್ತು. ಆದರೆ ದೈವಾದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸದೆ ಇರುವುದು ತಕ್ಕಮಟ್ಟಿಗೆ ನೆಮ್ಮದಿ ತಂದಿದೆ.