ಮೈಸೂರು: ಇಂದು ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ರಾಷ್ಟ್ರಧ್ವಜದ ಬಣ್ಣವನ್ನೇ ತಪ್ಪಾಗಿ ಹೇಳುವುದರ ಮೂಲಕ ಇದೀಗ ಎಡವಟ್ಟು ಮಾಡಿಕೊಂಡಿದ್ದಾರೆಂದು ವರದಿಯಾಗಿದೆ. ಬಿಜೆಪಿಯ ಹರ್ ಘರ್ ತಿರಂಗಾದ ಬಗ್ಗೆ ಟೀಕಿಸುವ ಭರದಲ್ಲಿ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಈ ಎಡವಟ್ಟು ಮಾಡಿಕೊಂಡಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿದೆ.
ಬಿಜೆಪಿಯಿಂದ ಕರೆ ನೀಡಿರುವಂತ ಹರ್ ಘರ್ ತಿರಂಗಾ ಬಗ್ಗೆ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ ಅವರು, ಈ ವೇಳೆಯಲ್ಲಿ ರಾಷ್ಟ್ರಧ್ವಜದ ಬಣ್ಣವನ್ನು ಕೆಂಪು, ಬಿಳಿ, ಹಸಿರು ಎಂಬುದಾಗಿ ತಪ್ಪಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನವು ಕಾಂಗ್ರೆಸ್ ನಿಂದಲೇ ಆಗಿದ್ದು. ಈಗ ಬಿಜೆಪಿಯವರು ದೇಶವೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಗಾಂಧೀಜಿ, ತಿಲಕರು ಮಾಡಿದಂತ ತ್ಯಾಗ, ಬಲಿದಾನದ ಸಂಕೇತ ಸ್ವಾತಂತ್ರ್ಯವಾಗಿದೆ. ತ್ಯಾಗ, ಶಾಂತಿ, ಸಮೃದ್ಧಿ ಈ ದೇಶದ ರಾಷ್ಟ್ರಧ್ವಜವಾಗಿದೆ. ಇದೇ ಧ್ವಜವನ್ನು ವೀರ ಸಾರ್ವಕರ್ ವಿರೋಧ ಮಾಡಿದ್ದರು ಎನ್ನುತ್ತಲೇ ಕೇಸರಿ, ಬಿಳಿ ಹಸಿರಿನ ಬಣ್ಣದ ಧ್ವಜ ಎನ್ನುವ ಬದಲಾಗಿ, ಕೆಂಪು, ಬಿಳಿ, ಹಸಿರು ಎಂಬುದಾಗಿ ತಪ್ಪಾಗಿ ಹೇಳಿದ್ರು ಎನ್ನಲಾಗಿದೆ.