ಕುಮಟಾ : ತಾಲೂಕಿನ ಕಲ್ಲಬ್ಬೆಯ ಶ್ರೀ ನಂದಿಕೆಶ್ವರ ದೇವಸ್ಥಾನದ ಸಭಾಭವನದಲ್ಲಿ ಕಲ್ಲಬ್ಬೆ ಗ್ರಾಮಪಂಚಾಯತ್ ವ್ಯಾಪ್ತಿಯ ಜನಸಂಪರ್ಕ ಸಭೆ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಈ ಸಭೆಯಲ್ಲಿ ನಡೆದ ವಿಚಾರವಿನಿಮಯ ಕಾರ್ಯಕ್ರಮದಲ್ಲಿ ಕಳೆದ ನಾಲ್ಕುವರೆ ವರ್ಷಗಳಲ್ಲಿ ಕಲ್ಲಬ್ಬೆ ಭಾಗದಲ್ಲಿ ನೆರವೇರಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಸಾರ್ವಜನಿಕರು ಕೆಲವು ಬೇಡಿಕೆಗಳನ್ನು ಪ್ರಸ್ತಾಪಿಸಿದಾಗ, ಅವುಗಳಬಗ್ಗೆ ಕೂಡಲೇ ಸ್ಪಂದಿಸುವುದಾಗಿ ಭರವಸೆ ನೀಡಲಾಯಿತು.
ಕಲ್ಲಬ್ಬೆ ಗ್ರಾಮಪಂಚಾಯತ್ ವ್ಯಾಪ್ತಿಯ ಸುಮಾರು ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬ್ಯಾಗ್ ಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ವೇಳೆ ಪಕ್ಷದ ಮುಖಂಡತು ಹಾಗೂ ಕಾರ್ಯಕರ್ತರು , ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು, ಸರ್ಕಾರಿ ಅಧಿಕಾರಿಗಳು ಈ ಜನಸಂಪರ್ಕ ಸಭೆಯಲ್ಲಿ ಉಪಸ್ಥಿತರಿದ್ದರು.