ಕಾರವಾರ : ಇಡೀ ಜಗತ್ತನ್ನೇ ಸ್ತಬ್ಧವಾಗಿಸಿ, ಒಮ್ಮೆ ತಣ್ಣಗಾಗಿದ್ದ ಕರೋನ ಮತ್ತೆ ಏರಿಕೆ ಆಗುತ್ತಿದ್ದು, ಉತ್ತರ ಕನ್ನಡದಲ್ಲಿಯೂ ಸಹ ಕರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ ಇಂದು ಒಂಬತ್ತು ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,ಕಾರವಾರ- 2, ಕುಮಟಾ-2, ಹಳಿಯಾಳ-4 ,ಜೋಯಿಡಾ-1 ಪಾಸಿಟಿವ್ ವರದಿಯಾಗಿದೆ.
ನಾಲ್ಕು ಜನರು ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 65 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದು,69 ಸಕ್ರಿಯ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ನಿಂದ 824 ಜನ ಮೃತಪಟ್ಟಿದ್ದು ,ಈವರೆಗೆ 71295 ಜನ ಕರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ ಕರೋನಾ ದಿಂದ ಕಾರವಾರದಲ್ಲಿ 129 ಜನ ಮೃತಪಟ್ಟಿದ್ದಾರೆ. ಇದರ ನಂತರ ಹಳಿಯಾಳದಲ್ಲಿ 128 ಜನ ಮೃತರಾಗಿದ್ದು ,ಹೊನ್ನಾವರ ,ಶಿರಸಿಯಲ್ಲಿ ತಲಾ 112 ಜನ ಮೃತಪಟ್ಟಿದ್ದು ಅತೀ ಹೆಚ್ಚು ಸಾವಿನ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ