ಕುಮಟಾ : ಗ್ರಾಮಪಂಚಾಯತ ದೇವಗಿರಿ‌ ಹಾಗೂ ನಾಗಮ್ಮ ಪ್ರಕಾಶನ ಹೊಳೆಗದ್ದೆ ಇದರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಜೀವನ ವೈವಿದ್ಯದ ಬಗ್ಗೆ ಹೊಳೆಗದ್ದೆಯ ಶಿಕ್ಷಕ, ಸಾಹಿತಿ ಪಿ.ಆರ್ ನಾಯ್ಕರವರು ಬರೆದ “ದೇವಗಿರಿ” ಕೃತಿಯ ಬಿಡುಗಡೆ ಸಮಾರಂಭ ಧಾರೇಶ್ವರದ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ, ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ನಾನೇನು ಸಾಹಿತಿ ಅಲ್ಲ ಮಾತುಗಾರನೂ ಅಲ್ಲ, ಆದರೆ ಸಾಹಿತ್ಯ ಪ್ರೇಮಿ ಎಂದ ಅವರು, ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾ ಪುಸ್ತಕ ಬರವಣಿಗೆಯ ಹಿಂದಿನ ಶ್ರಮವನ್ನು ಶ್ಲಾಘಿಸಿದರು.

ಸಾಹಿತಿ ಡಾ. ಸೈಯದ್ ಝಮೀರುಲ್ಲಾ ಷರೀಫ್ ಪುಸ್ತಕ ಪರಿಚಯಿಸುತ್ತಾ ಒಂದು ಪ್ರದೇಶದ ಕುರಿತಾಗಿ ಮಾಹಿತಿ ಸಂಗ್ರಹಿಸಿ ಇಷ್ಟೆಲ್ಲಾ ಅಲೆದಾಟ ಮಾಡಿ ಪುಸ್ತಕ ಬರೆದಿರುವ ಹಿಂದಿನ ಶ್ರಮ ನಿಜವಾಗಿಯೂ ಶ್ಲಾಘನೀಯ. ಇಂತಹ ಸಾಹಿತಿಗಳ ಮೂಲಕ ಕನ್ನಡ ಸಾಹಿತ್ಯ ಉಳಿಯುತ್ತದೆ. ಜೊತೆಗೆ ಶಿಕ್ಷಣಕ್ಕೂ ಇದು ಪೂರಕವಾಗಿದೆ ಎಂದರು.

ಡಿ.ಡಿ.ಪಿ.ಐ ಈಶ್ವರ ನಾಯ್ಕ ದೇವಗಿರಿ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಒಂದು ಪ್ರದೇಶದ ಆಳ ಹರಿವುಗಳನ್ನು ಸಮಗ್ರವಾಗಿ ಚಿತ್ರಿಸಿರುವ ಈ ಪುಸ್ತಕ ಮುಂದಿನ ಭವಿಷ್ಯಕ್ಕೆ ವಿದ್ಯಾರ್ಥಿಗಳಿಗೆ ಕೈಪಿಡಿ ಆಗಲಿದೆ ಎಂದರು.

ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ಶ್ರೀಮತಿ ರತ್ನಾ ಸುರೇಶ ಹರಿಕಾಂತ (ಅಧ್ಯಕ್ಷರು, ಗ್ರಾಮ ಪಂಚಾಯತ, ದೇವಗಿರಿ), ಶ್ರೀ ಹರೀಶ ಎಲ್. ಗಾಂವಕರ (ಮಾನ್ಯ ನಿವೃತ್ತ ಉಪನಿರ್ದೇಶಕರು, ಶಿರಸಿ), ಶ್ರೀ ರಾಜೇಂದ್ರ ಎಲ್. ಭಟ್ (ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕುಮಟಾ) ಶ್ರೀಮತಿ ರೇಖಾ ನಾಯ್ಕ (ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ, ಕುಮಟಾ) ಶ್ರೀ ರೋಹಿದಾಸ ನಾಯಕ (ಮಾಜಿ ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಉತ್ತರ ಕನ್ನಡ ಜಿಲ್ಲೆ) ಶ್ರೀ ಆನಂದು ಗಾಂವಕರ (ಜಿಲ್ಲಾಧ್ಯಕ್ಷರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕಾರವಾರ) ಶ್ರೀ ಎಸ್. ಐ. ನಾಯ್ಕ ಉಪಾಧ್ಯಕ್ಷರು, (ಗ್ರಾಮ ಪಂಚಾಯತ, ದೇವಗಿರಿ), ಶ್ರೀ ಸುಧೀಶ ನಾಯ್ಕ (ಗೌರವಾಧ್ಯಕ್ಷರು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕಾರವಾರ), ಶ್ರೀ ರವೀಂದ್ರ ಭಟ್ಟ ಸೂರಿ ( ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕುಮಟಾ), ಶ್ರೀ ಮಂಜುನಾಥ ಭಟ್ಟ (ಅಧ್ಯಕ್ಷರು, ಯಕ್ಷಗಾನ ಸಂಶೋಧನಾ ಕೇಂದ್ರ, ಕುಮಟಾ) ಶ್ರೀ ವಿನಯಕುಮಾರ್ ನಾಯ್ಕ (ಪಂಚಾಯತ ಅಭಿವೃದ್ಧಿ ಅಧಿಕಾರಿ, ದೇವಗಿರಿ) ಇತರರು ಹಾಜರಿದ್ದರು. ಕೃತಿಕಾರ ಪಿ.ಆರ್ ನಾಯ್ಕ ಸರ್ವರನ್ನೂ ಸ್ವಾಗತಿಸಿದರು.

RELATED ARTICLES  ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೆ ರಾಜಕಾರಣಕ್ಕೆ ಬರುವೆ ಅಸ್ನೋಟಿಕರ್.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಸ್ಥಳೀಯತೆ’ ವಿಚಾರದ ಕುರಿತಾಗಿ ವಿಚಾರ ಸಂಕಿರಣ ನಡೆಯಿತು. ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ರಾಜೇಂದ್ರ ಎಲ್. ಭಟ್ಟ ವಿಚಾರ ಸಂಕಿರಣ ನಡೆಸಿಕೊಟ್ಟರು. ಡಾ. ಡಿ. ಡಿ. ಭಟ್ಟ, ಶ್ರೀಮತಿ ರತ್ನಾ ಹರಿಕಾಂತ, ಶ್ರೀಮತಿ ರೇಖಾ ನಾಯ್ಕ, ಡಾ. ಎಸ್. ಡಿ. ಹೆಗಡೆ, ಶ್ರೀ ಪಿ. ಆರ್. ನಾಯ್ಕ, ಪ್ರೊ. ಆರ್. ಎಸ್. ನಾಯಕ, ಪ್ರೊ. ರಾಜೀವ ಕೋನಟ್ಟಿ, ಡಾ. ಶ್ರೀಧರ ಉಪ್ಪಿನಗಣಪತಿ, ಶ್ರೀ ಪಿ. ಎಮ್. ಮುಕ್ತಿಶ್ರೀ ಸುಬ್ಬಯ್ಯ ನಾಯ್ಕ, ಶ್ರೀ ಎಸ್. ಎಚ್. ಗೌಡ, ಶ್ರೀ ಗಂಗಾಧರ ನಾಯ್ಕ, ಪ್ರೊ. ಪ್ರಮೋದ ನಾಯ್ಕ, ಪ್ರೊ. ಗಿರೀಶ ವನ್ನಳ್ಳಿ, ಶ್ರೀ ವಿ. ಎಮ್. ರೇವಣಕರ್, ಶ್ರೀ ವಿ. ಕೆ. ಭಟ್ಟ, ಶ್ರೀ ಎ. ಆರ್. ಭಟ್ಟ, ಶ್ರೀ ದಯಾನಂದ ದೇಶಭಂಡಾರಿ, ಶ್ರೀ ಅಶೋಕ ನಾಯ್ಕ, ಶ್ರೀ ಯೋಗೇಶ ಪಟಗಾರ, ಶ್ರೀ ಸುರೇಶ ಭಟ್ಟ, ಶ್ರೀ ಸುರೇಶ ನಾಯ್ಕ, ಶ್ರೀಮತಿ ಮಾಲತಿ ನಾಯ್ಕ, ಶ್ರೀಮತಿ ಸವಿತಾ ನಾಯ್ಕ, ಶ್ರೀಮತಿ ಪರಮೇಶ್ವರಿ ಗುನಗಾ, ಶ್ರೀ ಸುರೇಶ ಕೆ. ಶ್ರೀಮತಿ ಮಾಲತಿ ಭಂಡಾರಿ, ಶ್ರೀಮತಿ ಅನುಪಮಾ ಪಟಗಾರ, ಶ್ರೀ ರತ್ನಾಕರ ಭಂಡಾರಿ, ಶ್ರೀ ರಾಜೇಶ ಶೇಟ್, ಶ್ರೀ ಜನಾರ್ಧನ ಹರವೀರ,
ಶ್ರೀ ಸುಬ್ರಾಯ ಶಾನಭಾಗ, ಶ್ರೀ ವೆಂಕಟೇಶ ಶೇಟ್, ಶ್ರೀಮತಿ ಸೀತಾ ಭಟ್ಟ, ಶ್ರೀಮತಿ ಆಶಾ ನಾಯ್ಕ, ಶ್ರೀಮತಿ ಕವಿತಾ ಭಟ್ಟ, ಶ್ರೀಮತಿ ಉಮಾ ನಾಯ್ಕ, ಶ್ರೀಮತಿ ಪ್ರತಿಮಾ ಹೆಗಡೆ, ಶ್ರೀ ಮಂಜುನಾಥ ಕೊಡಿಯಾರ, ಶ್ರೀಮತಿ ಪದ್ಮಲತಾ ನಾಯ್ಕ, ಶ್ರೀಮತಿ ಪದ್ಮಾವತಿ ನಾಯ್ಕ, ಶ್ರೀಮತಿ ಸುಜಾತಾ ಭಟ್ಟ, ಶ್ರೀಮತಿ ರಮಾ ನಾಯ್ಕ, ಶ್ರೀ ನಿತ್ಯಾನಂದ ನಾಯ್ಕ, ಶ್ರೀ ವಾಸುದೇವ ರೇವಣಕರ, ಶ್ರೀ ತಿರುಮಲ ನಾಯ್ಕ, ಶ್ರೀ ನಾಗೇಶ ಎಚ್. ಪೈ, ಶ್ರೀ ರಾಜು ದೇಶಭಂಡಾಲ, ಶ್ರೀ ವಿನಾಯಕ ಪಟಗಾರ, ಶ್ರೀಮತಿ ರಮಾ ದೇಶಭಂಡಾರಿ, ಶ್ರೀಮತಿ ಸುಮಿತ್ರಾ ಭಟ್ಟ, ಶ್ರೀ ಎಮ್. ಆರ್. ಮುಕ್ರಿ, ಶ್ರೀಮತಿ ಸರಸ್ವತಿ ಭಟ್ಟ, ಶ್ರೀ ವಿಶ್ವೇಶ್ವರ ಭಟ್ಟ, ಶ್ರೀಮತಿ ಮಂಗಲಾ ಭಟ್ಟ ಇತರರು ಭಾಗವಹಿಸಿದರು.

RELATED ARTICLES  ಜನ ಸಂಪರ್ಕ ಸಭೆ : ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ