ಅಂಕೋಲಾ: ಗುಂಡಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ಗುಂಡಬಾಳಾ ಶಾಲಾ ಶಿಕ್ಷಕಿ ಶೋಭಾ ಸಣ್ಣಪ್ಪ ನಾಯಕ ತನ್ನ ಕುಟುಂಬದ ಸಹಕಾರದೊಂದಿಗೆ ತಮ್ಮ ತಾಯಿ ದಿ.ಶಾಂತಿ ನಾಯಕರ ಸ್ಮರಣಾರ್ಥ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ ಮೆಟ್ಟಿಲುಗಳನ್ನು, ಶಾಲಾ ಕಮಾನು, ಗೇಟ್ ನಿರ್ಮಾಣ ಕಾರ್ಯವನ್ನು ಮಾಡಿಕೊಟ್ಟಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಲಕ್ಷ್ಮೀ ಪಾಟೀಲ ಅವುಗಳನ್ನು ಉದ್ಘಾಟಿಸಿದರು.

RELATED ARTICLES  ಆತ್ಮಲಿಂಗ ಪೂಜೆ ನೆರವೇರಿಸಿದ ಶ್ರೀ ಶ್ರೀ ಪ್ರೇಮಾನಂದ ಭಾರತೀ ಮಹಾಸ್ವಾಮಿಗಳು

ಈ ವೇಳೆ ಮಾತನಾಡಿದ ಅವರು, ಶಿಕ್ಷಕಿ ಶೋಭಾ ನಾಯಕ ಅವರ ಸೇವೆ ಸ್ಮರಣೀಯವಾದುದು. ಇದೊಂದು ಮಾದರಿ ಕಾರ್ಯ ಈ ಮಹತ್ಕಾರ್ಯದ ಉದ್ಘಾಟನೆಯನ್ನು ನೆರವೇರಿಸಿರುವುದು ನನಗೆ ಸಂತೋಷವನ್ನು ತಂದಿದೆ ಎಂದರು.

ಶಿಕ್ಷಕಿ ಶೋಭಾ ಎಸ್.ನಾಯಕ ಮಾತನಾಡಿ, ನನ್ನ ತಾಯಿ ನನ್ನ ಆದರ್ಶ. ಈ ಕಾರ್ಯಕ್ಕೆ ನನ್ನ ತಾಯಿಯೇ ನನಗೆ ಪ್ರೇರಣೆ ಎಂದರು.

RELATED ARTICLES  ಶ್ರೀ ಭಾರತೀ ಆಂಗ್ಲ ಮಾದ್ಯಮ ಶಾಲೆ ಕವಲಕ್ಕಿಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ

ಕ್ಷೇತ್ರ ಸಮನ್ವಯಾಧಿಕಾರಿ ಹರ್ಷಿತಾ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರಿ, ಕಾರ್ಯದರ್ಶಿ ರಾಜು ಎಚ್.ನಾಯಕ, ಉಪಾಧ್ಯಕ್ಷ ಮಂಜುನಾಥ ನಾಯಕ, ಶಾಲಾ ಮುಖ್ಯ ಶಿಕ್ಷಕಿ ತಿಮ್ಮಕ್ಕ ಗೌಡ, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.