ಕಾರವಾರ: ಮಸ್ಕತ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಕಾರವಾರ ಯುವಕನೋರ್ವ ಕೊನೆಯುಸಿರೆಳೆದ ಘಟನೆ ಮಂಗಳವಾರ ನಡೆದಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ನಗರದ ತೆಲಂಗ ರಸ್ತೆಯ ಬೆಂಜಿಮ್ ನರ್ತಾಭಾಗ್ ನಿವಾಸಿಯಾಗಿದ್ದ ಯುವಕನೇ ಮೃತಪಟ್ಟ ಯುವಕನಾಗಿದ್ದಾನೆ.

RELATED ARTICLES  ಪ್ರದೋಷ ಮಹಿಮೆ

ಈತ ಮಸ್ಕತ್‌ನಲ್ಲಿ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿದ್ದು ಮಂಗಳವಾರ ತನ್ನ ನೌಕರರನ್ನ ಕಾರಿನಲ್ಲಿ ಬಿಟ್ಟು ಬರುವಾಗ ಅಪಘಾತ ಆಗಿದೆ ಎನ್ನಲಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಮೃತ ಬೆಂಜಿಮ್ ಸಹೋದರ ಸಹ ಕುವೈತ್‌ನಲ್ಲಿದ್ದಾನೆ ಎನ್ನಲಾಗಿದ್ದು, ಈತನಿಗೆ ಯಲ್ಲಾಪುರ ಮೂಲದ ಯುವತಿಯ ಜೊತೆ ವಿವಾಹ ನಿಶ್ಚಯವಾಗಿತ್ತು ಎನ್ನಲಾಗಿದೆ. ಬೆಂಜಿಮ್ ತಂದೆ ಹಾಗೂ ತಾಯಿ ಇಬ್ಬರು ಮೃತಪಟ್ಟಿದ್ದು, ಕಾರವಾರಕ್ಕೆ ಮೃತದೇಹ ಯಾವಾಗ ಬರುತ್ತದೆ ಎನ್ನುವ ಮಾಹಿತಿ
ಕುಟುಂಬದವರಿಗೆ ಇನ್ನು ಲಭ್ಯವಾಗಿಲ್ಲ.

RELATED ARTICLES  ಮತದಾನ ಮಾಡಿದ ಸಂಸದ ಅನಂತಕುಮಾರ್ ಹೆಗಡೆ.