ಅಂಕೋಲಾ : ರಾ.ಹೆ 66 ರ ತಾಲೂಕಿನ ಅವರ್ಸಾ – ಹಾರವಾಡ ಗಡಿಭಾಗದ ಡಾಂಬರ್ ಪ್ಲಾಂಟ್ ಕ್ರಾಸ್ ಬಳಿ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೆ, ಹಿಂಬದಿ ಸವಾರ ಮೃತಪಟ್ಟ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸಿಡಿದು ಬಿದ್ದಿದ್ದರೆ, ಕಾರ್ ಪಲ್ಟಿಯಾಗಿ ರಸ್ತೆಯಂಚಿನ ಕಂದಕಕ್ಕೆ ಬಿದ್ದಿದೆ ಎನ್ನಲಾಗಿದೆ. ಈತನು ತನ್ನ ತಂದೆ ಕೃಷ್ಣ ಕುರ್ಲೆಯ ಜೊತೆ ಕಾರವಾರದಿಂದ ಅಂಕೋಲಾದತ್ತ ಮನೆಗೆ ಬರುತ್ತಿರಬೇಕಾದರೆ ಈ ಘಟನೆ ನಡೆದಿದೆ.
ಭಾವಿಕೇರಿ ಗ್ರಾಪಂ ವ್ಯಾಪ್ತಿಯ ಗಾಬಿತ ಕೇಣಿ ನಿವಾಸಿ ಸಚಿನ್ ಕೃಷ್ಣ ಕುರ್ಲೆ ಮೃತ ದುರ್ದೈವಿಯಾಗಿದ್ದು, ಮಾರ್ಗ ಮಧ್ಯೆ ಡಾಂಬರ್ ಪ್ಲಾಂಟ್ ಕ್ರಾಸ್ ಬಳಿ ಜೋರಾಗಿ ಬಂದ ಕಾರೊಂದು ಅಪಘಾತ ಪಡಿಸಿದೆ ಎನ್ನಲಾಗಿದೆ. ಅಪಘಾತದ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.