ಕುಮಟಾ :-ಯಾವ ದೇಶದಲ್ಲಿ ಬೋಧಕರಿಗೆ ವಿಶೇಷವಾದ ಮಾನ್ಯತೆ ಇದೆಯೋ ಆ ದೇಶವು ನಿಸ್ಸಂದೆಹವಾಗಿ ಅಭಿವೃದ್ಧಿ ಯನ್ನು ಹೊಂದಲು ಸಾಧ್ಯ ಎಂದು ಖ್ಯಾತ ಯಕ್ಷಗಾನ ಕಲಾವಿದ ಹಾಗು ಡಯಟಿ ನ ವಿಶ್ರಾಂತ ಉಪನ್ಯಾಸಕ ಬಿ. ಎಸ್. ಗೌಡ ಹೇಳಿದರು. ಅವರು ತಾಲೂಕಿನ ಬಗ್ಗೋಣದ ಮಡಿವಾಳ ಕೇರಿಯಲ್ಲಿನ ಅಧ್ಯಾಪಕ ಎಸ್. ಎಸ್ ಪೈ ರವರ ‘ಮುಕಾಂಬಿಕಾ ‘ನಿವಾಸದಲ್ಲಿ ನೂತನವಾಗಿ ಆಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಬೋಧಕರ ಸಂಘದ ಲಾಂಛನವನ್ನು ಅನಾವರಣಗೊಳಿಸಿ ಮಾತನಾಡಿದರು. ಬೋಧಕರು ಸಂಘಟಿತರಾಗಬೇಕು ಬೋಧಕರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಆಡಳಿತ ವ್ಯವಸ್ಥೆಯು ಪ್ರಾಶಸ್ತ್ಯವನ್ನು ನೀಡುವಲ್ಲಿ ಬೋಧಕರ ಧ್ವನಿಯಾಗಿ ತೆರೆದುಕೊಂಡು ಕರ್ನಾಟಕ ರಾಜ್ಯ ಬೋಧಕರ ಸಂಘ ದಕ್ಷ ಹಾಗೂ ಪ್ರಾಮಾಣಿಕರನ್ನೊಳಗೊಂಡ ತಂಡವಾಗಿರುವುದರಿಂದ ಇದಕ್ಕೆ ಭವಿಷ್ಯ ಇದೆ ಎಂದ ಅವರು, ಸಂಘದ ಲಾಂಛನವನ್ನು ಖ್ಯಾತ ಚಿತ್ರಕಾರ ಸತೀಶ ಯಲ್ಲಾಪುರರವರು ಪರಿಣಾಮಕಾಯಾಗಿ ಚಿತ್ರಿಸಿ ಉಪಕರಿಸಿರುವುದು ಅಭಿನಂದನೀಯವೆಂದರು.

RELATED ARTICLES  ಸರ್ಕಾರಿ ಕಚೇರಿ ಮತ್ತು ಸಂಸ್ಥೆಗಳ ನಾಮಫಲಕವು ಆಡಳಿತ ಭಾಷೆಯಾದ ಕನ್ನಡ ಹಾಗೂ ಸರ್ಕಾರ ಮಾನ್ಯ ಮಾಡಿರುವ ಭಾಷೆಯಲ್ಲಿಯೇ ಇರಬೇಕು : ಕನ್ನಡ ಸಾಹಿತ್ಯ ಪರಿಷತ್ ಆಗ್ರಹ

ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ ಬರ್ಗಿಯವರು ಸಮಾರಂಭದ ಸಭಾಧ್ಯಕ್ಷತೆಯನ್ನು ವಹಿಸಿ ಡಾ. ಆರ್. ಎಂ. ಕುಬೇರಪ್ಪ ಸೂರಜ ನಾಯ್ಕ ಸೋನಿ ಹಾಗೂ ಪ್ರೊ.ಎಮ್. ಜಿ. ಭಟ್ ರವರ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಬೋಧಕರ ಸಂಘವು ಸ್ವಾತಂತ್ರ್ಯ ದ ಅಮೃತಮಹೋತ್ಸವದ ಪರ್ವ ಕಾಲದಲ್ಲಿ ತೆರೆದುಕೊಂಡು, ವಿವಿಧ ಸ್ತರದ ಬೋಧಕರ ಹಿತಾಸಕ್ತಿಗಾಗಿ ನಿರಂತರವಾಗಿ ಕಾರ್ಯ ಪ್ರವೃತ್ತವಾಗಲಿದೆ ಎಂದರು. ಬಿ. ಎಸ್. ಗೌಡರವರನ್ನು ಸಂಧ್ಯಾ -ಶಿವಾನಂದ ಪೈ ದಂಪತಿಗಳು ಫಲ, ತಾಂಬೂಲ, ಶಾಲು ಹಾಗು ಸ್ಮರಣಿಕೆಯೊಂದಿಗೆ ಆಪ್ತವಾಗಿ ಗೌರವಿಸಿದರು.

RELATED ARTICLES  ಕಾಂಗ್ರೇಸಿನ ನಿದ್ದೆಗೆಡಿಸಿದರಾ ಬಿಜೆಪಿ ಫೈರ್ ಅನಂತ ಕುಮಾರ ಹೆಗಡೆ?

ಸಂಘದ ರಾಜ್ಯ ಸಂಚಾಲಕರಾದ ವಿಜಯ ಕುಮಾರ ನಾಯ್ಕ್, ಕೋಶಧ್ಯಕ್ಷ ಶಿವಚಂದ್ರ, ಹಿರಿಯ ಅಧ್ಯಾಪಕ ಬಾಲಚಂದ್ರ ಗಾಂವಕರ, ರಾಜು ನಾಯಕ ಚಿತ್ರಿಗಿ ಹಾಗು ಗೋಪಾಲಕೃಷ್ಣ ಪುರಾಣಿಕ ಮೊದಲದವರಿದ್ದರು.