ಶಿರಸಿ: ರೈತನೊಬ್ಬ ಕರಡಿಯ ದಾಳಿಗೆ ತುತ್ತಾಗಿ ಮೃತಪಟ್ಟಿರುವ ಘಟನೆ ದೇವನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಂಡಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಸುಂಡಳ್ಳಿ ಗ್ರಾಮದ ಓಂಕಾರ ಪದ್ಮನಾಭ ಜೈನ್ (52) ಸಾವನಪ್ಪಿದ ರೈತ ಎಂದು ಗುರುತಿಸಲಾಗಿದೆ. ಮನೆಯ ಹತ್ತಿರದ ಕಾಡಿನಿಂದ ಉಪ್ಪಾಗೆ ಹಣ್ಣು ಸಂಗ್ರಹಕ್ಕೆ ತೆರಳಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಚೀರಾಟದ ಧ್ವನಿ ಕೇಳಿ ಕಾಡಿನತ್ತ ಓಡಿಬಂದ ಸ್ಥಳೀಯರು,ಕರಡಿಯಿಂದ ಪಾರಾಗಲು ಅವರು ಸಾಕಷ್ಟು ದೂರ ಓಡಿ ಬಂದಿರುವ ಸಾಧ್ಯತೆ ಇದೆ. ರಕ್ಷಣೆಗೆ ಮರ ಏರುವಾಗ ದಾಳಿ ಮಾಡಿದೆ. ಮರದ ಬುಡದಲ್ಲೇ ದೇಹಕ್ಕೆ ಗಂಭೀರ ಗಾಯಗೊಂಡಿದ್ದ ಓಂಕಾರರವರ ಮೃತ ದೇಹ ಇತ್ತು. ಅವರ ದೇಹದ ಮೇಲಾದ ಗಾಯ ಗಮನಿಸಿದಾಗ ಇದು ಕರಡಿ ದಾಳಿ ಎಂಬುದು ಸ್ಪಷ್ಟವಾಯಿತು’ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮತ್ತಿಘಟ್ಟದ ಅರಣ್ ಭಾಗದಲ್ಲಿ ಕರಡಿಗಳಿದ್ದು ಅದು ಸರಗುಪ್ಪ ಭಾಗಕ್ಕೆ ಬಂದಿರುವ ಸಾಧ್ಯತೆ ಇದೆ. ಈ ಸ್ಥಳವನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಕಾಡಿನ ಅಂಚಿನಲ್ಲಿರುವ ಗ್ರಾಮಗಳ ಜನರಿಗೆ ಜಾಗ್ರತೆಯಿಂದ ಇರಲು ಸೂಚಿಸಲಾಗಿದೆ’ ಎಂದು ಜಾನ್ಮನೆ ವಲಯ ಅರಣ್ಯಾಧಿಕಾರಿ ಮಂಜುನಾಥ ಹೆಬ್ಬಾರ್ ಪ್ರತಿಕ್ರಿಯಿಸಿದರು ಎಂದು ವರದಿಯಾಗಿದೆ.