ಹೊನ್ನಾವರ : ತಾಲೂಕಿನ ಅನೇಕ ಭಾಗಗಳಲ್ಲಿ ಮತ್ತೆ ನೆರೆಯ ಭೀತಿ ಎದುರಾಗಿದ್ದು, ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿಯಾಗಿದ್ದು ಇಂದು ಒಂದು ಗೇಟ್ ತೆಗೆದು ನೀರನ್ನು ಸಾಂಪ್ರದಾಯಿಕವಾಗಿ ಹೊರಬಿಡಲಾಗಿದೆ ಎಂದು ವರದಿಯಾಗಿದೆ. ಜಲಾಶಯ ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಯಾವುದೇ ಸಂದರ್ಭದಲ್ಲಿ ನೀರನ್ನು ಹೊರಬಿಡುವ ಸಾಧ್ಯತೆಗಳಿದ್ದು, ಇದೀಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಭಾಗಕ್ಕೂ ಇದರ ಬಿಸಿ ತಟ್ಟಲಿದ್ದು ಗೇರುಸೊಪ್ಪದ ಡ್ಯಾಮ್ ನಲ್ಲಿ ಸಹ ಇದೀಗ ನೀರು ಭರ್ತಿಯಾಗುತಿದ್ದು ಲಿಂಗನಮಕ್ಕಿಯಿಂದ ನೀರು ಹೊರಬಿಟ್ಟಲ್ಲಿ ಗೇರುಸೊಪ್ಪದ ಡ್ಯಾಮ್ ನಿಂದ ಐದು ಗೇಟ್ ಗಳನ್ನು ತೆರೆದು ಲಿಂಗನಮಕ್ಕಿ ಡ್ಯಾಮ್ ನಿಂದ ಬಿಡುಗಡೆಯಾದ ಪ್ರಮಾಣದಷ್ಟೇ ನೀರು ಹೊರಬಿಡಲಿದ್ದಾರೆ.
ಜಲಾಶಯದ ಗರಿಷ್ಟ ಮಟ್ಟ 1819 ಅಡಿ ಇದ್ದು ಸದ್ಯ 1807.70 ಅಡಿಯಷ್ಟು ನೀರು ಭರ್ತಿಯಾಗಿದೆ. ನೀರಿನ ಮಟ್ಟ 1816 ಅಡಿ ತಲುಪಿದ ನಂತರ ನೀರನ್ನು ಹೊರಬಿಡಲಾಗುತ್ತದೆ. ಇದೀಗ ಲಿಂಗನಮಕ್ಕಿ ಜಲಾಶಯಕ್ಕೆ ಸದ್ಯ 50ಸಾವಿರ ಕ್ಯಾಸೆಕ್ ಗಿಂತಲೂ ಹೆಚ್ಚಿನ ನೀರು ಹರಿದುಬರುತ್ತಿದೆ ಎನ್ನಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನದಿ ಪಾತ್ರದ ಜನರಿಗೆ ಎರಡುಬಾರಿ ಅಲರ್ಟ ನೀಡಲಾಗಿದೆ. ಜನರು ಸುರಕ್ಷರೆ ದೃಷ್ಟಿಯಿಂದ ಬೇರೆಡೆ ಸ್ಥಳಾಂತರಗೊಳ್ಳುವಂತೆ ಕೆಪಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಶರಾವತಿ ನದಿ ನೀರು ಪ್ರದೇಶದ ಶಿವಮೊಗ್ಗ ಜಿಲ್ಲೆಯ ಸಾಗರಕಕ್ಕೂ ಅಲರ್ಟ ನೀಡಲಾಗಿದೆ.
ಈ ಹಿನ್ನಲೆಯಲ್ಲಿ ಕೆ.ಪಿಸಿ ಅಧಿಕಾರಿಗಳು ಗೇರುಸೊಪ್ಪದ ಜಲಾಶಯ ಪ್ರದೇಶದ 18 ಗ್ರಾಮದ ವ್ಯಾಪ್ತಿಯ ಜನರಿಗೆ ಸುರಕ್ಷಿತ ಪ್ರದೇಶದಲ್ಲಿ ಇರುವಂತೆ ಎಚ್ಚರಿಕೆ ನೀಡಿದ್ದಾರೆ.