ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾ.ಪಂ. ಸಭಾಭವನದಲ್ಲಿ ಸಾಲ್ಕೋಡ್, ಮುಗ್ವಾ, ಹೊಸಾಕುಳಿ, ಕಡ್ಲೆ, ಕಡತೋಕಾ, ಚಂದಾವರ ಗ್ರಾಮ ಪಂಚಾಯತಿ ವ್ಯಾಪ್ತಿಯ 2021-22 ನೇ ಸಾಲಿನ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ಮಂಜೂರಾದ ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಆದೇಶ ಪತ್ರ ವಿತರಣೆ ಮಾಡಿದರು. ಆರು ಗ್ರಾ.ಪಂ. ವ್ಯಾಪ್ತಿಯ 68 ಫಲಾನುಭವಿಗಳಿಗೆ ಸರ್ಕಾರದಿಂದ ಮಂಜೂರಾದ ಆದೇಶದ ಪ್ರತಿಯಿನ್ನು ಶಾಸಕ ದಿನಕರ ಶೆಟ್ಟಿ ಹಸ್ತಾಂತರಿಸಿದರು.
ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆಯಡಿ ತಾಲೂಕಿನ ಸ್ವಸಹಾಯ ಸಂಘದ ಸದಸ್ಯರು ಸಿದ್ದಪಡಿಸಿದ ತ್ರಿವರ್ಣ ಧ್ವಜವನ್ನು ಶಾಸಕರು ಗ್ರಾ.ಪಂ. ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಸಾಂಕೇತಿಕವಾಗಿ ವಿತರಿಸಿದರು.
ತಾಲೂಕ ಪಂಚಾಯತಿ ಆಡಳಿತಾಧಿಕಾರಿ ವಿನೋಧ ಅನ್ವೇಕರ್, ತಾಲೂಕ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ,ಗ್ರಾ.ಪಂ. ಅಧ್ಯಕ್ಷರಾದ ರಜನಿ ನಾಯ್ಕ, ಗೊವಿಂದ ಗೌಡ, ಸುರೇಖಾ ನಾಯ್ಕ, ಛಾಯಾ ಉಬಯಕರ್, ಕೃಷ್ಣ ಗೌಡ, ಗೌರಿ ಅಂಬಿಗ, ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು. ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.