ಅಂಕೋಲಾ : ತಾಲೂಕಿನ ಮೂಲದ ಶ್ರೀಮತಿ. ಅಂಜುಮಲಾ ತಿಮ್ಮಣ್ಣ ನಾಯಕ ಇವರಿಗೆ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಯಿಂದ ಡಿ.ವೈ.ಎಸ್.ಪಿ. ಹುದ್ದೆಗೆ ( ಸಿ. ಐ. ಡಿ, ಬೆಂಗಳೂರ ) ಪದೋನ್ನತಿ ಯನ್ನು ನೀಡಿ ಸರಕಾರ ಆದೇಶಿಸಿದೆ. ಪೊಲೀಸ ಇಲಾಖೆಯಲ್ಲಿ ಅತ್ಯಂತ ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡ ಇವರು ವಿವಿಧ ಕ್ಲಿಷ್ಟಕರ ಪ್ರಕರಣದ ತನಿಖಾಧಿಕಾರಿ ಯಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

RELATED ARTICLES  ಗೋಕರ್ಣದ ರಸ್ತೆಯಲ್ಲಿಯೂ ಅರೆಬರೆ ಬಟ್ಟೆ ಧರಿಸುವಂತಿಲ್ಲ : ಹೊಸ ರೂಲ್ ಜಾರಿ : ಸಾರ್ವಜನಿಕ ವಲಯದಲ್ಲಿ ಬೇರೆ ಬೇರೆ ಮಾತು.

ಅಂಜುಮಾಲಾ ಮೂಲತಃ ಅಂಕೋಲಾ ದ ಶಿರಗುಂಜಿ ಗ್ರಾಮದ ನಿವೃತ್ತ ಶಿಕ್ಷಕ ದಂಪತಿಗಳಾದ ಶ್ರೀಮತಿ ಶಾಂತಿ ನಾಯಕ ಮತ್ತು ಶ್ರೀ. ತಿಮ್ಮಣ್ಣ ನಾಯಕ ಇವರ ಸುಪುತ್ರಿ ಆಗಿದ್ದು ಇವರ ಪತಿ ಶ್ರೀ. ಮಹೇಶ ಜಟಕನಮನೆ ( ದೇವರಭಾವಿ) . ಶ್ರೀಮತಿ ಅಂಜುಮಲಾ ಇವರು ಅಂಕೊಲಾದ ದಂತವೈದ್ಯ ರಾದ ಡಾ. ಸಂಜು ನಾಯಕ ಮತ್ತು ಕಾರವಾರ ದ ದಂತ ವೈದ್ಯ ಡಾ. ಸಮೀರಕುಮಾರ ನಾಯಕ ಮತ್ತು ಮಂಜುನಾಥ್ ನಾಯಕ, ( ಬೆಂಗಳೂರ ) ಇವರ ಸಹೋದರಿ.

RELATED ARTICLES  ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಚಿತಾಭಸ್ಮ ಗೋಕರ್ಣದಲ್ಲಿ ವಿಸರ್ಜನೆ.