ಹಿರೇಗುತ್ತಿ: ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ನರೇಂದ್ರ ಬಾಳಾ ದೇಸಾಯಿಯವರು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಿದ ನೋಟ್‌ಬುಕ್‌ನ್ನು ವಿತರಣೆ ಮಾಡಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹೊನ್ನಪ್ಪ ಎನ್ ನಾಯಕ ಮಾತನಾಡಿ “ನರೇಂದ್ರ ದೇಸಾಯಿಯವರ ಸಾಮಾಜಿಕ ಸೇವೆ ಹಾಗೂ ಮಕ್ಕಳ ಬಗ್ಗೆ ಇರುವ ಕಾಳಜಿಯನ್ನು ಶ್ಲಾಘಿಸಿ ಅವರಿಗೆ ಧನ್ಯವಾದ ಅರ್ಪಿಸಿದರು”.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮೋಹನ ಬಿ ಕೆರೆಮನೆ ಮಾತನಾಡಿ “ವಿದ್ಯಾರ್ಥಿಗಳು ಜೀವನದಲ್ಲಿ ಸದ್ಗುಣಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ತಲುಪಬೇಕೆಂದು” ಕಿವಿಮಾತು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್ ರಾಮು ಹಿರೇಗುತ್ತಿ “ನನ್ನ ಆತ್ಮೀಯರಾದ ನರೇಂದ್ರ ದೇಸಾಯಿ ತಾಯಿಯ ಹೆಸರಿನಲ್ಲಿ ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಟ್ರಸ್ಟ್ ಸ್ಥಾಪಿಸಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಸಾಯಿಯವರಿಂದ ಬಡಮಕ್ಕಳಿಗೆ ಇನ್ನೂ ಹೆಚ್ಚಿನ ಸಹಕಾರ ಪ್ರೋತ್ಸಾಹ ಸಿಗುವಂತಾಗಲಿ ಎಂದು ವಿನಂತಿಸಿ ಅವರ ಸೇವಾ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು”. ಮುಖ್ಯಾಧ್ಯಾಪಕರ ರೋಹಿದಾಸ ಗಾಂವಕರರವರು “ಪರೋಪಕಾರಾರ್ಥ ಇದಂ ಶರೀರಂ” ಎಂಬಂತೆ ದೇಸಾಯಿಯವರ ಸೇವೆ ಸಮಾಜಕ್ಕೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸುಮಿತ್ರಾ ಗೌಡ ಮಾಜಿ ಅಧ್ಯಕ್ಷರು ಗ್ರಾ.ಪಂ ತೊರ್ಕೆ, ಗಣಪತಿ ಗುನಗಾ ಮೊಗಟಾ, ಹಿರೇಗುತ್ತಿ ವಸತಿನಿಲಯದ ಮೇಲ್ವಿಚಾರಕರಾದ ಶ್ಯಾಮಲಾ, ಶಿಕ್ಷಕರಾದ ಬಾಲಚಂದ್ರ ಹೆಗಡೆಕರ, ವಿಶ್ವನಾಥ ಬೇವಿನಕಟ್ಟಿ, ನಾಗರಾಜ ನಾಯಕ, ಮಹಾದೇವ ಗೌಡ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ, ಶಿಲ್ಪಾ ನಾಯಕ, ಜಾನಕಿ ಗೊಂಡ, ಮದನ ನಾಯಕ, ಕವಿತಾ ಅಂಬಿಗ ಉಪಸ್ಥಿತರಿದ್ದರು. ನಾಗಶ್ರೀ ಸಂಗಡಿಗರು ಸ್ವಾಗತಗೀತೆ ಹಾಡಿದರು. ಕಾಂಚಿಕಾ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ವಿಜೇತ ಗುನಗ ವಂದಿಸಿದರು. ಗೋಪಾಲಕೃಷ್ಣ ಗುನಗ ಹಾಗೂ ಗೋವಿಂದ ನಾಯ್ಕ ಸಹಕರಿಸಿದರು.
ವರದಿ: ಎನ್ ರಾಮು ಹಿರೇಗುತ್ತಿ