ಹೊನ್ನಾವರ: ತಾಲೂಕಿನ ಸಾಲ್ಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರೆಅಂಗಡಿಯಲ್ಲಿರುವ ಗ್ರಾಮ ಚಾವಡಿಯ ಕಟ್ಟಡದ ಒಂದು ಭಾಗವು ಕುಸಿಯುವ ಭೀತಿ ಎದುರಾಗಿದ್ದು ಕಟ್ಟಡದ ಇಂತಹ ಅವಸ್ಥೆಯಲ್ಲಿ ಮಹಿಳಾ ಗ್ರಾಮ ಲೆಕ್ಕಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಟ್ಟಡದ ಒಂದು ಭಾಗ ಕುಸಿಯುವುದಲ್ಲದೆ, ಚಾವಣಿಯ ಹೆಂಚು ಪೂರ್ತಿ ಬಿದ್ದು ಹೋಗಿ ಮಳೆ ನೀರು ಒಳಗೆ ಬೀಳುತ್ತಿದೆ. ಒಳಗೆ ಇರುವ ಸಾಮಗ್ರಿಗೆ ನೀರು ತಾಗದಂತೆ ಪ್ಲಾಸ್ಟಿಕ್, ಬ್ಯಾನರ್‌ನಿಂದ ಮುಚ್ಚಿಡಲಾಗಿದ್ದು . ಕಟ್ಟಡಕ್ಕೆ ಬಳಸಿದ ಕಟ್ಟಿಗೆಯ ಕಿಟಕಿ, ಬಾಗಿಲು, ಜಂತಿ, ರೀಪ್, ಪಕಾಸು ಮುರಿದು ಬೀಳುವ ಸ್ಥಿತಿಯಲ್ಲಿದೆ. ನೆಲ ಪೂರ್ತಿ ಒದ್ದೆಯಾಗಿದ್ದು, ಕೆಸರು ಕಾಲಿಗೆ ಅಂಟುಕೊಳ್ಳುತ್ತಿವೆ. ಕಟ್ಟಡದ ಬಹುತೇಕ ಭಾಗ ಬಳಕೆ ಮಾಡಿಕೊಳ್ಳುತ್ತಿಲ್ಲ. ಮುಖ್ಯದ್ವಾರದಲ್ಲಿರುವ ಒಂದು ಕೊಠಡಿಯನ್ನು ಮಾತ್ರ ಗ್ರಾಮ ಲೆಕ್ಕಿಗರು ಬಳಸಿಕೊಳ್ಳುತ್ತಿದ್ದಾರೆ.

RELATED ARTICLES  ಹಿರೇಗುತ್ತಿಯ ವೆಂಕಟ್ರಾಯ(ಪಮ್ಮು) ಬೀರಣ್ಣ ನಾಯಕರವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

ಗ್ರಾಮೀಣ ಪ್ರದೇಶವಾಗಿರುದರಿಂದ ಕಂದಾಯ ಇಲಾಖೆಯ ಹಲವು ಸೌಲಭ್ಯ ಹಾಗೂ ದಾಖಲಾತಿಗಾಗಿ ಪ್ರತಿನಿತ್ಯ ಇದೇ ಕಛೇರಿಗೆ ನೂರಾರು ಸಾರ್ವಜನಿಕರು ಆಗಮಿಸುತ್ತಾರೆ. ಸರಿಸುಮಾರು ೪೦ ವರ್ಷದ ಹಿಂದಿನ ಕಟ್ಟಡ ಇದಾಗಿದ್ದು , ಈ ಕಟ್ಟಡಕ್ಕೆ ಇಷ್ಟು ವರ್ಷ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ದಾನಿಗಳ ನೆರವಿನಿಂದ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ದಾನಿಗಳ ನೆರವು ಸಿಗದೆ ಇದ್ದರೆ ಈಗಲೂ ಕೂಡ ಕತ್ತಲೆಯಲ್ಲೇ ಇರಬೇಕಾಗಿತ್ತು.

. ಭೂ ದಾಖಲೆಯಿಂದ ಹಿಡಿದು, ಜಾತಿ, ಆದಾಯ ಹೀಗೆ ಯಾವುದೇ ದಾಖಲಾತಿ ಬೇಕಿದ್ದರು ಇಲ್ಲಿ ಬರಲೇ ಬೇಕು. ಎಷ್ಟೋ ವರ್ಷದ ದಾಖಲೆಗಳನ್ನು ಕಾದಿಡಬೇಕು. ಇಂತಹ ಇಲಾಖೆಗೂ ಒಂದು ಸುಸಜ್ಜಿತ ಕಟ್ಟಡ ಕೊಡಲು ಸರಕಾರ ಹಿಂದೇಟು ಹಾಕಿದೆ. ಈ ಕಟ್ಟಡದ ಅವ್ಯವಸ್ಥೆಯ ಬಗ್ಗೆ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಎಲ್ಲಾ ಅಧಿಕಾರಿಗಳು, ಗ್ರಾ.ಪಂ.ಪ್ರತಿನಿಧಿಯಿAದ ಹಿಡಿದು, ಶಾಸಕರು, ಜಿಲ್ಲಾ ಉಸ್ತುವಾರಿ ಸಚೀವರು, ಹಾಗೂ ಕಂದಾಯ ಸಚೀವರವರೆಗೂ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

RELATED ARTICLES  ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ.

ತಹಶೀಲ್ದಾರರು, ಜಿ.ಪಂ. ಇಂಜಿನಿಯರ್ ಬಂದು ಸ್ಥಳ ಪರೀಶೀಲನೆ ಮಾಡಿದ್ದು, ಬಿಟ್ಟರೆ ಏನು ಪ್ರಯೋಜನ ಇದುವರೆಗೂ ಆಗಿಲ್ಲ. ಈ ಸಮಸ್ಯೆಯನ್ನು ಸ್ಥಳಿಯ ಶಾಸಕ ದಿನಕರ ಶೆಟ್ಟಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಅನಾಹುತ ಸಂಭವಿಸುವ ಪೂರ್ವದಲ್ಲಿ ಕಟ್ಟಡ ಬೇರೆಡೆ ಸ್ಥಳಾಂತರಿಸಬೇಕಿದೆ.
ಗ್ರಾಮದಲ್ಲಿ ೨ ಗುಂಟೆ ಕಂದಾಯ ಜಾಗ ಇದ್ದು, ಈ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಕಾರ್ಯವಾಗಬೇಕಿದೆ.