ದಾಂಡೇಲಿ: ಕಾಳಿ ನದಿಯ ಪಕ್ಕದ ಅಲೈಡ್ ಏರಿಯಾ ನದಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಮೊಸಳೆಯು ಎಳೆದು ಕೊಂಡು ಹೋದ ಘಟನೆ ನಡೆದಿದೆ. ಸುರೇಶ್ ವಸಂತ ತೇಲಿ (44) ಮೊಸಳೆ ದಾಳಿಗೊಳಗಾದ ವ್ಯಕ್ತಿಯಾಗಿದ್ದು, ಒಂದು ಗಂಡು ಎರಡು ಹೆಣ್ಣು ಮಕ್ಕಳನ್ನು ಹೊಂದಿದ್ದು, ಸ್ಥಳದಲ್ಲಿ ಕುಟುಂಬಸ್ಥರ ದುಃಖ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳದಲ್ಲಿ ಅಧಿಕಾರಿಗಳು ಹಾಜರಿದ್ದರು ಶೋಧಕಾರ್ಯ ನಡೆಸಿದ್ದಾರೆ.