ಕಾರವಾರ; ಭಾರತ ದೇಶವು 75 ವರ್ಷಗಳಾಗುತ್ತಿರುವ ಈ ಶುಭ ವಿಶೇಷ ಸಂದರ್ಭದ ಸವಿ ನೆನಪಿಗಾಗಿ ‘ಹರ್ ಘರ್ ತಿರಂಗಾ’ ದೇಶಾದ್ಯಂತ ಆಚರಿಸಲಾಗುತ್ತದೆ. ತಾಲೂಕಿನ ಕಡಲಸಿರಿ ಯುವ ಸಂಘದ ವತಿಯಿಂದ ‘ಸೆಲ್ಫಿ ವಿತ್ ತಿರಂಗಾ’ ಒಂದು ವಿಶೇಷ ಸ್ವರ್ಧೆಯನ್ನು ಆಯೋಜಿಸಿದ್ದಾರೆ. ಹೆಮ್ಮೆಯ ರಾಷ್ಟ್ರ ಧ್ವಜದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಬೇಕು. ಉತ್ತಮ ಫೋಟೋ ಗುಣಮಟ್ಟವನ್ನು ಹೊಂದಿರಬೇಕು ಚಿತ್ರವು ಪೋಟ್ರೇಟ್ ಮೋಡ್/ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿರಬೇಕು.

RELATED ARTICLES  ಮಹಾತ್ಮಾ ಗಾಂಧಿ ಪ್ರೌಢಶಾಲೆಗೆ ರೋಟರಿಯಿಂದ ಮಾಸ್ಕ್ ವಿತರಣೆ

ನಮೂದುಗಳನ್ನು ಕಡಲ ಸಿರಿ ಯುವ ಸಂಘದ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಇದರ ನಿಯಮವು ಗರಿಷ್ಠ ಸಂಖ್ಯೆಯ ಲೈಕ್ ಪಡೆದವರಿಗೆ ಆಧಾರದ ಮೇಲೆ ಇರುತ್ತದೆ.
ನಕಲಿ ಲೈಕ್ ಪಡೆದವರಿಗೆ ಅನರ್ಹತೆಗೆ ಒಳಪಡಿಸಲಾಗುವುದು. ಸಂಘಟಕರ ನಿರ್ಧಾರವು ಅಂತಿಮವಾಗಿರುತ್ತದೆ ಆ ಪೋಟೋವನ್ನು 9483999629,8861928158 ಈ ನಂಬರ್ ಗೆ ವಾಟ್ಸಪ್ ಮೂಲಕ ಕಳುಹಿಸಬೇಕು.ಈ ಸ್ವರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಂದವರಿಗೆ ಆಕರ್ಷಕ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಪೋಟೋವನ್ನು ದಿನಾಂಕ ಅಗಸ್ಟ್ 16 ಒಳಗೆ ಕಳುಹಿಸಬೇಕು ಮತ್ತು ಇದರ ಫಲಿತಾಂಶವನ್ನು ಅಗಸ್ಟ್ 21ಕ್ಕೆ ತಿಳಿಸಲಾಗುತ್ತದೆ ಅಂತ ಕಡಲ ಸಿರಿ ಯುವ ಸಂಘದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಕರಾವಳಿ ಉತ್ಸವದಲ್ಲಿ ಗಮನಸೆಳೆದ ಶ್ವಾನ ಪ್ರದರ್ಶನ: ದೇಶ ವಿದೇಶದ ಶ್ವಾನಗಳನ್ನು ನೋಡಿ ಸಂತಸಪಟ್ಟ ಜನರು