ಅಂಕೋಲಾ : ಅಂಕೋಲಾ-ಮಾದನಗೇರಿ ಮಾರ್ಗವಾಗಿ ಶಿವಪುರ-ಕೆಂಕಣಿ ಬಸ್ಸ್ ಸಂಚಾರ ಸೆಡ್ಯೂಲ್ ಮಾಡದೇ ಇದ್ದ ಕಾರಣ ಸ್ಥಗಿತವಾಗಿತ್ತು. ಈಗ ಸಾಮಾಜಿಕ ಹೋರಾಟಗಾರಾದ ಹೊಸಬಣ್ಣ ಕೃಷ್ಣ ನಾಯಕ ಆಂದ್ಲೆ, ಇವರ ಪ್ರಯತ್ನದಿಂದ ಖಾಯಂ ಬಸ್ ಆಗಿ ಪರಿವರ್ತಿಸಿ ದಿನಾಂಕ ೧೩-೦೮-೨೦೨೨ ಶನಿವಾರ ಹೊಸದಾಗಿ ಬಸ್ಸ್ ಸಂಚಾರ ಅಂಕೋಲಾ – ಮಾದನಗೇರಿ – ಆಂದ್ಲೆ – ಶಿವಪುರ – ಕೆಂಕಣಿ – ಖಂಡಗಾರ-ಹುಳಸೆ ಈ ಮಾರ್ಗದ ಮೂಲಕ ಸಂಚಾರ ಆರಂಭಿಸಿದೆ.
ಬೆಳಿಗ್ಗೆ ೮ ಗಂಟೆಗೆ ಅಂಕೋಲಾದಿಂದ ಹೊರಟು ಮಾದನಗೇರಿ ಮಾರ್ಗವಾಗಿ ಹುಳಸೆ ೯ ಗಂಟೆಗೆ ತಲುಪುತ್ತದೆ. ಬಸ್ಸ್ ಸಂಚಾರ ಹೊಸದಾಗಿ ಆರಂಭವಾಗಲು ಪ್ರಯತ್ನಿಸಿದ ಸಾಮಾಜಿಕ ಹೋರಾಟಗಾರಾದ ಹೊಸಬಣ್ಣ ಕೃಷ್ಣ ನಾಯಕ ಆಂದ್ಲೆ, ಹಾಗೂ ಡಿವಿಷನಲ್ ಕಂಟ್ರೋಲರ್ ಶಿರಸಿ, ಡಿ.ಟಿ.ಓ ಸುರೇಶ ನಾಯ್ಕ, ಪ್ರವೀಣ ಶೇಟ್ ಹಾಗೂ ಅಂಕೋಲಾ ಡಿಪೋ ಅಧಿಕಾರಿಗಳಿಗೆ ಸಹಕರಿಸಿದ ಸರ್ವರಿಗೂ ಆಂದ್ಲೆ, ಶಿವಪುರ, ಕೆಂಕಣಿ, ಖಂಡಗಾರ, ಹುಳಸೆ ಗ್ರಾಮದ ಯುವಕ ಸಂಘದವರು ಹಾಗೂ ಊರನಾಗರಿಕರು ಅಭಿನಂದಿಸಿ ಹೊಸಬಣ್ಣ ಗಾಂವಕರರವರಿಂದ ಇನ್ನೂ ಹೆಚ್ಚಿನ ಸಾಮಾಜಿಕ ಸೇವೆ ನಡೆಯಲಿ ಎಂದು ಶುಭ ಹಾರೈಸಿದರು.
ವರದಿ: ಎನ್ ರಾಮು ಹಿರೇಗುತ್ತಿ