ಕುಮಟಾ : ತಾಲೂಕಾ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ರೇವತಿ ಪಿ.ಐ ರವರು ಧ್ವಜಾರೋಹಣ ಮಾಡಿ 75 ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಠಾಣಾ ಸಿಬ್ಬಂದಿಯವರಿಗೆ, ತಾಂತ್ರಿಕ ಸಿಬ್ಬಂದಿಯವರಿಗೆ, ಕೆ.ಎನ್.ಡಿ ಸಿಬ್ಬಂದಿಯವರಿಗೆ, ಎಸ್.ಆರ್.ಡಿ ಸದಸ್ಯರಿಗೆ, ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ, ಹಾಗೂ ಕರಾವಳಿ ತೀರದ ಸಾರ್ವಜನಿಕರಿಗೆ ಶುಭಾಶಯಗಳನ್ನು ಕೋರಿರುತ್ತಾರೆ.
ಸಮಾರಂಭದಮುಖ್ಯ ಅತಿಥಿ ಸ್ಥಾನವನ್ನು ಭೂಸೇನೆಯ ಕರಾವಳಿ ತೀರದ ಮಾಜಿ ಕರ್ನಲ್ ಶ್ರೀ ಅನಂತ ರಾಮದಾಸ ಮಾಸೂರಕರ ರವರು ವಹಿಸಿದ್ದರು, ಸಭೆಯಲ್ಲಿ ಕರಾವಳಿ ಕಾಲವಲುಪಡೆಯ ಎಸ್.ಪಿ ಅಬ್ದುಲ್ ಅಹದ್ ಇದ್ದರು, ಸಮಾರಂಭದಲ್ಲಿ ಮೊದಲಿಗೆ ಮಾಜಿ ಕರ್ನಲ್ ಶ್ರೀ ಅನಂತ ರಾಮದಾಸ ಮಾಸೂರಕರವರಿಗೆ ಪ್ರಶಂಸನಾ ಪತ್ರವನ್ನು ಮತ್ತು ನೆನಪಿನ ಕಾಣಿಕೆ ನೀಡುವುದರ ಮೂಲಕ ಮಾಜಿ ಸೈನಿಕರನ್ನು ಗೌರವಿಸಲಾಯಿತು.ನಂತರ ತಾಂತ್ರಿಕ ಸಿಬ್ಬಂದಿಗಳು ಹಾಗೂ ಮಾಜಿ ಸೈನಿಕರಾದ ಶ್ರೀಪಾದ ಬಾಂದೇಕರ (ಸಹಾಯಕ ಬೋಟ್ ಕ್ಯಾಪ್ಟನ್) 2) ದಿನೇಶ ಕುಮಾರ (ಎಮ್.ಎಲ್.ಎಮ್) 3) ಸಂತೋಷ ಹರಿಕಂತ್ರ (ಕಲಾಸಿ) 4) ಪರಾಗ ಬಾಂದೇಕರ (ಕಲಾಶಿ) ಇವರಿಗೆ ಮಾಜಿ ಕರ್ನಲ್ ಶ್ರೀ ಅನಂತ ರಾಮದಾಸ ಮಾಸೂರಕರ ರವರು ಪ್ರಶಂಸನಾ ಪತ್ರವನ್ನು ನೀಡುವುದರ ಮೂಲಕ ಸನ್ಮಾನವನ್ನು ಮಾಡಲಾಯಿತು.
ಠಾಣೆಯ ಸಿಬ್ಬಂದಿಗಳು ಹಾಗೂ ಮಾಜಿ ಸೈನಿಕರಾದ ಯೋಗೇಶ ನಾಯಕ, ಗಣಪತಿ ನಾಯಕ, ತಿಮ್ಮಣ್ಣ ನಾಯ್ಕ ರವರನ್ನು ಸನ್ಮಾನಿಸಲಾಯಿತು. ಠಾಣೆಯ ಸಿಬ್ಬಂದಿಗಳಾದ ಶ್ರೀ ಪ್ರಕಾಶ ಪಟಗಾರ ಹಾಗೂ ದಿನೇಶ ನಾಯ್ಕ ರವರನ್ನು ಕೇಂದ್ರ ಕಚೇರಿ ಮಲ್ಪೆಯಿಂದ ಮಾನ್ಯ ಎಸ್.ಪಿ ಅವರಿಂದ ಬಂದಿರುವ ಪ್ರಶಂಸನಾ ಪತ್ರವನ್ನು ನೀಡುವುದರ ಮೂಲಕ ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ಕರಾವಳಿ ತೀರದ ಮೀನುಗಾರರ ಮಕ್ಕಳಾಗಿರುವ ನಿಶಾಂತ ಗಣಪತಿ ಹರಿಕಂತ್ರ, ವಿಶಾಲ ಶಿವಾನಂದ ಅಂಬಿಗ, ವರುಣ ಶಿವಾನಂದ ಅಂಬಿಗ, ಒಲವಿಯಾ ಮುನವೆಲ್ ಲೋಪಿಸ್, ಶ್ರೇಯಾ ಸತೀಶ ಅಂಕೋಲೆಕರ್, ಸುಕನ್ಯಾ ವಿನಾಯಕ ಮೇಸ್ತ, ವೇದಿಕಾ ಪಾಂಡುರಂಗ ಸೋಡನ್ನರ್, ಮುಫಿಜಾ ಅಬ್ದುಲ ರಹಿಮ್ ಶೇಕ್, ಸಹನಾ ರತ್ನಾಕರ ಹರಿಕಂತ್ರ, ಹೆಚ್. ಭೂಮಿಕಾ ಪ್ರಶಂಸನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಲಾಯಿತು.
ಎಲ್ಲಾ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ, ಕೆ.ಎನ್.ಡಿ ಸದಸ್ಯರಿಗೆ, ಎಸ್.ಆರ್.ಡಿ ಸದಸ್ಯರಿಗೆ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಮತ್ತು ಠಾಣೆಯ ಸ್ವೀಪರ್ ರವರಿಗೆ ಪುಷ್ಪ ಗುಚ್ಛ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರದಲ್ಲಿ ಅಳೆದಂಡೆಯಿಂದ ಕಡೆಕೋಡಿಯ ವರೆಗೆ ಬೀಚ್ ವಾಕ್ ಹಾಗೂ ಬೀಚ್ ಸ್ವಚ್ಛತೆ ಕಾರ್ಯಕ್ರಮವನ್ನು ನಡೆಸಲಾಯಿತು.