ಶಿರಸಿ: ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಸಮನ್ವಯ ಸಭೆ ಹೆಗಡೆಕಟ್ಟಾದಲ್ಲಿ ಆಗಸ್ಟ್ 15ರಂದು ಜರುಗಿತು. ಸೇವಾ ಸಹಕಾರಿ ಸಂಘ ಹೆಗಡೆಕಟ್ಟಾ ದ ಸಭಾಭವನ ದಲ್ಲಿ ನಡೆದ ಕಾರ್ಯಕ್ರಮ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಲ್ಲಿ ಹೊಂದಾಣಿಕೆ ತರುವ ಕುರಿತು ಸಮಾಲೋಚಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಗಡೆಕಟ್ಟಾ ಸೊಸೈಟಿ ಅಧ್ಯಕ್ಷ ಎಂ ಪಿ ಹೆಗಡೆ ಮಾತನಾಡಿ ಕೃಷಿ ಕೂಲಿ ಸಮಸ್ಯೆ ಹಿನ್ನೆಲೆಯಲ್ಲಿ ಕಾರ್ಬನ್ ಫೈಬರ್ ದೋಟಿ ಮೂಲಕ ಮದ್ದು ಸಿಂಪಡಿಸುವ ಕೊನೆ ಕೊಯ್ಲು ಕಾರ್ಯ ಇಂತಹ ವಿಷಯಗಳಲ್ಲಿ ಏಕರೂಪತೆ ತರಬೇಕಿದೆ. ರೈತ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊರೆಯಾಗದ ರೀತಿಯಲ್ಲಿ ಎಲ್ಲರೂ ಸೇರಿ ಒಂದು ವಿಚಾರಕ್ಕೆ ಬರಬೇಕಿದೆ ಸಹಕಾರಿ ಸಂಘಗಳಲ್ಲಿ ಪರಸ್ಪರ ಸಹಕಾರ ಸಮನ್ವಯ ಇರಬೇಕು ಎಂದರು. ಮತ್ತಿಘಟ್ಟ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ ಇದೊಂದು ಒಳ್ಳೆಯ ಕಲ್ಪನೆ ಹೇಗೆ ಸಾಧಿಸಬೇಕು ಯಾವ ರೀತಿ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕು ಎಂಬುದು ಮುಖ್ಯ ಎಂದರು.
ಹಳ್ಳಿಯ ಸಹಕಾರಿ ಸಂಘಗಳ ವ್ಯಾಪಾರ ವ್ಯವಹಾರ ದಲ್ಲಿಯೂ ಕೂಡ ಪರಸ್ಪರ ಹೊಂದಾಣಿಕೆ ಬೇಕು, ಫೈಬರ್ ದೋಟಿ ಸಬ್ಸಿಡಿ ಹಣ ಎಲ್ಲರಿಗೂ ಸಿಗುವಂತೆ ಮಾಡಲು ಅಧಿಕಾರಿಗಳು ಮತ್ತು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು 20 ಕ್ಕೂ ಹೆಚ್ಚು ಸೊಸೈಟಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಸರ್ವಾನುಮತದಿಂದ ಒಪ್ಪಿ ಒತ್ತಾಯಿಸಲಾಯಿತು. ವಿ ಎಸ್ ಹೆಗಡೆ ಕೆಶಿನ್ಮನೆ ಜಿ ಟಿ ಹೆಗಡೆ ತಟ್ಟಿಸರ ಮಾತನಾಡಿದರು. ಕೃಷಿ ಕೂಲಿಕಾರರ ಸಮಸ್ಯೆ ನೀಗಿಸುವಲ್ಲಿ ಸಹಕಾರಿ ಸಂಘಗಳು ಎಷ್ಟರಮಟ್ಟಿಗೆ ನೆರವಾಗಬಲ್ಲವು ಮತ್ತು ಮಾರ್ಗದರ್ಶನ ನೀಡಬಲ್ಲವು ಎಂಬ ಬಗ್ಗೆ ಚಿಂತನೆ ನಡೆಸಲಾಯಿತು.
RELATED ARTICLES  ಕನ್ನಡ ಹಬ್ಬಕ್ಕೆ ನಾಡೋಜ ಮಹೇಶ್ ಜೋಷಿಯವರಿಂದ ಚಾಲನೆ.