ಶ್ರೀಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿ ಇಲ್ಲಿ ಧ್ವಜಾಹೋಹಣ ಕಾರ್ಯಕ್ರಮವನ್ನು ಶ್ರೀ ಸಿದ್ಧಿವಿನಾಯಕ ವಿದ್ಯಾ ಪ್ರಸಾರ ಸಮಿತಿ ಗೋಳಿ ಇದರ ಅಧ್ಯಕ್ಷರಾದ ಶ್ರೀ ಎಮ್ ಎಲ್ ಹೆಗಡೆ ಹಲಸಿಗೆ ಇವರು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ೨೦೨೧-೨೨ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಶಾಲಾ ವಾರ್ಷಿಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದಾನಿಗಳು ಇಟ್ಟ ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು. ಸಮಿತಿಯ ಉಪಾಧ್ಯಕ್ಷರಾದ ಶ್ರೀ ದಿವಾಕರ ಗ ಹೆಗಡೆ ಟೊಣ್ಣೆಮನೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ರಮೇಶ ಭಟ್ಟ ಅಬ್ಬಿಹದ್ದ, ಶ್ರೀಮತಿ ಸರಸ್ವತಿ ಹೆಗಡೆ ಮುಳಕನಹಳ್ಳಿ, ಶ್ರೀ ಗಜಾನನ ಹೆಗಡೆ ದೊಡ್ಮನೆ, ನೆಗ್ಗು ಪಂಚಾಯತ ಸದಸ್ಯರಾದ ಶ್ರೀಮತಿ ನೇತ್ರಾವತಿ ಹೆಗಡೆ, ದಾನಿಗಳಾದ ಶ್ರೀ ಶಂಕರ ಎಸ್ ಹೆಗಡೆ ಹುಣಸೆಕೊಪ್ಪ ಇವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ನಾರಾಯಣ ದೈಮನೆ ಸ್ವಾಗತಿಸಿದರು,ಕುಮಾರಿ ಶ್ರೇಯಾ ಹೆಗಡೆ ಪ್ರಾರ್ಥಿಸಿದಳು. ಶ್ರೀಮತಿ ಮುಕ್ತಾ ಭಟ್ಟ ದತ್ತಿನಿಧಿ ವಿತರಣೆ ನಿರ್ವಹಿಸಿದರು,ಶ್ರೀ ಆರ್ ಕೆ ಚವ್ಹಾಣ ವಂದಿಸಿದರು, ಶ್ರೀ ಪಿ ಮಂಜಪ್ಪನವರು ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಶಿಕ್ಷಕ ಸಿಬ್ಬಂದಿಗಳು ಹಾಜರಿದ್ದರು.ನಂತರದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.