ಶಿವಮೊಗ್ಗ: ದಸರಾ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ಪುರುಷರಿಗೆ ಇಡ್ಲಿ ತಿನ್ನುವ ಸ್ಪರ್ಧೆ ಹಾಗೂ ಮಹಿಳೆಯರಿಗೆ ಮೂಸಂಬಿ ತಿನ್ನುವ ಸ್ಪರ್ಧೆಯನ್ನ ಏರ್ಪಡಿಸಲಾಗಿತ್ತು.

ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ 15 ವರ್ಷದ ಬಾಲಕರಿಂದ 50 ವರ್ಷದ ಪುರುಷರವರೆಗೂ ನೂರಾರು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ನಗರ ಹೊರವಲಯದ ರಮೇಶ್ ಎಂಬಾತ 1 ನಿಮಿಷ ಅವಧಿಯಲ್ಲಿ 9 ಇಡ್ಲಿ ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದರು.

RELATED ARTICLES  ಆರ್.ಎಸ್.ಎಸ್ ನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಪ್ರಣಬ್ ಮಾತಿನ ಮೋಡಿ!

shm 8

ಇನ್ನು ಮಹಿಳೆಯರಿಗಾಗಿ ಮೂಸಂಬಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ನಗರದ ಮಂಜುಳಾ 2 ನಿಮಿಷದಲ್ಲಿ 5 ಮೂಸಂಬಿ ಹಣ್ಣುಗಳನ್ನು ತಿನ್ನುವ ಮೂಲಕ ವಿಜಯಿಯಾದರು.

ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನ ಗೆದ್ದವರಿಗೆ ಪಾಲಿಕೆ ವತಿಯಿಂದ ಬಟರ್ ಪ್ಲೈ ಗ್ರೈಂಡರ್ , ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ ಮಿಕ್ಸಿ ಹಾಗೂ ಐರನ್ ಬಾಕ್ಸ್ ಗಳನ್ನ ಬಹುಮಾನವಾಗಿ ನೀಡಲಾಯಿತು.