ಕುಮಟಾ : ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕೊಂಕಣ ಎಜ್ಯಕೇಶನ್ ಟ್ರಸ್ಟ್ ನವರು ಪ್ರತೀವರ್ಷವೂ ನೀಡುತ್ತಾ ಬಂದಿರುವ ವಿನಯ ಸ್ಮೃತಿ ಸಮರ್ಥ ಶಿಕ್ಷಕ ಪುರಸ್ಕಾರಕ್ಕೆ ಕುಮಟಾ ತಾಲೂಕಿನಲ್ಲೇ ಅತೀ ಎತ್ತರವಾದ ಹಾಗೂ ಹಿಂದುಳಿದ ಪ್ರದೇಶವಾದ ಮೇದಿನಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗಜಾನನ ಪಟಗಾರ ಮಾಸೂರು ಆಯ್ಕೆ ಯಾಗಿದ್ದಾರೆ.

ಶ್ರೀಯುತ ಗಜಾನನ ಪಟಗಾರ ಅವರು ಕುಮಟಾ ತಾಲೂಕಿನ ಮಾಸೂರು ಗ್ರಾಮದವರಾಗಿದ್ದು‌
1998 ನೇ ಇಸವಿಯಲ್ಲಿ ಮೇದಿನಿಯ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡರು.ತಾಲೂಕಾ ಕೇಂದ್ರದಿಂದ 47 ಕಿಲೋಮೀಟರ್ ದೂರವಿರುವ ಮೇದಿನಿ‌ ಕುಮಟಾ ಸಿದ್ದಾಪುರ ಮುಖ್ಯರಸ್ತೆಯಿಂದ ಏಳು ಕಿಲೋಮೀಟರ ದೂರದ ಎತ್ತರದ ಗುಡ್ಡದ ಮೇಲಿದೆ ಆ ಕಾಲದಲ್ಲಿ ದ್ವಿಚಕ್ರ ವಾಹನವೂ ಹೋಗದ ಕಡಿದಾದ ಕಾಲುದಾರಿಯಲ್ಲಿ ಕಾಲ್ನಡಿಗೆಯಲ್ಲಿಯೇ ಕ್ರಮಿಸಿ ವಿದ್ಯುತ್ ಸಂಪರ್ಕ ಇಲ್ಲದ ಚಿಮಣಿ ದೀಪವನ್ನೇ ನಂಬಿಕೊಂಡು ಇರುಳು ಕಳೆಯಬೇಕಾದ ಸಮಯದಲ್ಲಿ ಸ್ವಲ್ಪವೂ ಬೇಸರಿಸದೇ ಸಂತೋಷದಿಂದ ಕರ್ತವ್ಯ ನಿರ್ವಹಿಸಿದರು.ಶಾಲೆಗೆ ಹೊಂದಿಕೊಂಡ ಕಿರಿದಾದ ಕೊಠಡಿಯಲ್ಲೇ ವಾಸವಾದ ಇವರು ಬಿಸಿಯೂಟದ ಸಾಮಗ್ರಿಗಳನ್ನು ಕುಮಟಾದಿಂದಲೇ ಹೊತ್ತೊಯ್ದು ವಿದ್ಯಾರ್ಥಿಯ ಉಣಬಡಿಸುತ್ತಿದ್ದಾರೆ. ಪ್ರಶಸ್ತಿ ಪುರಸ್ಕಾರ ಪ್ರಚಾರ ಬಯಸದ ಇವರು ತಮ್ಮ ಕರ್ತವ್ಯದಲ್ಲೇ ಸಂತೋಷವನ್ನು ಕಂಡುಕೊಂಡಿರುವವರಾಗಿದ್ದಾರೆ. 23 ವರ್ಷಗಳಲ್ಲಿ ಸುರಕ್ಷಿತ ಸ್ಥಳಕ್ಕೆ ವರ್ಗಾವಣೆಯನ್ನೂ ಬಯಸದೇ ಮೇದಿನಿಯ ನೂರಾರು ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ನೀಡಿರುವ ಇವರು ಶಿಕ್ಷಣ ಕ್ಷೇತ್ರದ ಆಧುನಿಕ ಭಗೀರತರೇ ಆಗಿದ್ದಾರೆ.

RELATED ARTICLES  ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂ. ಕಾಲೇಜಿನ ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಂಪನ್ನ

ವಿನಯ ಸ್ಮೃತಿ ಸಮರ್ಥ ಶಿಕ್ಷಕ ಪುರಸ್ಕಾರವು ರಾಜ್ಯಪ್ರಶಸ್ತಿ ವಿಜೇತ ದಿವಂಗತ ಶಿಕ್ಷಕಿ ವಿನಯಾ ಶಾನಭಾಗ ಅವರ ಸ್ಮರಣೆಯಲ್ಲಿ ನೀಡುವ ಪುರಸ್ಕಾರ ಆಗಿದ್ದು.ರೂಪಾಯಿ 5000 ನಗದು ಗೌರವ ಫಲಕ ಹಾಗೂ ಸನ್ಮಾನಪತ್ರವನ್ನು ಒಳಗೊಂಡಿರುತ್ತದೆ. ದಿನಾಂಕ 20 ಅಗಸ್ಟ್ 2022 ರಂದು‌ ಶನಿವಾರ ಸಂಸ್ಥೆಯ ಸಭಾಭವನದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದೆಂದು
ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ವಂದೂರು ವಿ.ಎಸ್‍.ಎಸ್.ಅಧ್ಯಕ್ಷ ಸ್ಥಾನ ಅಲಂಕರಿಸಿದ ವಿ.ಕೆ.ವಿಶಾಲ