ದಿನಾಂಕ 16-08-2022 ರಂದು ಜನತಾ ವಿದ್ಯಾಲಯ ಧಾರೇಶ್ವರ ತಾಲೂಕು ಕುಮಟಾ ಉತ್ತರ ಕನ್ನಡ ಜಿಲ್ಲೆಯಲ್ಲಿ, ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್ ಉತ್ತರಕನ್ನಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಉಪ ನಿರ್ದೇಶಕರು (ಆಡಳಿತ) ಉತ್ತರಕನ್ನಡ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ, ಮತ್ತು ಜನತಾ ವಿದ್ಯಾಲಯ ಧಾರೇಶ್ವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ವಿಜ್ಞಾನ ಗೋಷ್ಠಿ ಮತ್ತು ನಾಟಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮುಖಾಂತರ ಪ್ರಾರಂಭವಾಗಿ ಪ್ರಾಸ್ತಾವಿಕ ನುಡಿ ಶಿಕ್ಷಣ ಸಂಯೋಜಕಿ ಕುಮಟಾ ಶ್ರೀಮತಿ ಜಯಶ್ರೀ ಎ.ಪಿ. ಮಾತನಾಡಿದರು, ಜನತಾ ವಿದ್ಯಾಲಯ ಧಾರೇಶ್ವರ ಶಾಲೆಯ ಮುಖ್ಯಾಧ್ಯಾಪಕರು ಶ್ರೀ ಗೋಪಿ. ಸಂಜೀವ. ಭಜಂತ್ರಿ ಎಲ್ಲರನ್ನೂ ಪುಷ್ಪ ನೀಡುವ ಮುಖಾಂತರ ಸ್ವಾಗತಿಸಿದರು, ಶ್ರೀ ಏನ್.ಜಿ.ನಾಯ್ಕ ನಿರ್ದೇಶಕರು (ಅಭಿವೃದ್ಧಿ) ಮತ್ತು ಪ್ರಾಚಾರ್ಯರು ಡಯಟ್ ಕುಮಟಾ, ದೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು ನಂತರ ಉದ್ಘಾಟನೆಯ ಮಾತುಗಳಿಂದ ಪ್ರಾರಂಭವಾಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಕುಮಟಾ ತಾಲೂಕಿನ ಮಾನ್ಯ ಸಮನ್ವಯಾಧಿಕಾರಿಗಳಾದ ಶ್ರೀಮತಿ ರೇಖಾ ನಾಯ್ಕ ಅವರು, ಶ್ರೀ ನಾಗರಾಜ ಗೌಡ ಉಪನ್ಯಾಸಕರು ಕುಮಟಾ ರವರು, ಶ್ರೀ ಕೆ.ಪಿ. ಬಂಡಾರಿ ಉಪನ್ಯಾಸಕರು ಡಯಟ್ ಕುಮಟಾ ರವರು ಮತ್ತು ಶ್ರೀ ಮಂಜುನಾಥ ಭಟ್ ಜನತಾ ವಿದ್ಯಾಲಯ ಧಾರೇಶ್ವರ ಶಾಲಾಭಿವೃದ್ಧಿ ಸಮಿತಿ ಸದಸ್ಯರು ರವರುಗಳು ತಮ್ಮ ಮಾತುಗಳಿಂದ ಮಕ್ಕಳಿಗೆ ಪ್ರೇರೇಪಣೆ ನೀಡಿದರು.

RELATED ARTICLES  ಕಲಾವಿದರು ರಾತ್ರಿಯಿಡೀ ನಿದ್ದೆಗೆಟ್ಟು ನಮ್ಮ ಕಲೆ, ಸಂಸ್ಕೃತಿ ಉಳಿಸಿದವರು : ಶಾಸಕ ದಿನಕರ ಶೆಟ್ಟಿ

ಅಧ್ಯಕ್ಷಸ್ಥಾನ ವಹಿಸಿದ್ದ ಜನತಾ ವಿದ್ಯಾಲಯ ಧಾರೇಶ್ವರ
ಶಾಲಾ ಅಭಿವೃದ್ಧಿ ಸಮಿತಿಯ ಕೋಶಾಧ್ಯಕ್ಷರಾದ ಶ್ರೀ ನಾಗರಾಜ ಶೇಟ್ ಅವರು ಮಾತನಾಡಿದರು ಇದೇ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಕಲ್ಪನಾ ಶಿವೇಶ್ವರ ವಂದಿಸಿದರು ಮತ್ತು ಶ್ರೀಮತಿ ಪ್ರತಿಭಾ ಭಾಗ್ವತ ಕಾರ್ಯಕ್ರಮ ನಿರೂಪಿಸಿದರು, ಈ ಕಾರ್ಯಕ್ರಮದಲ್ಲಿ ನಮ್ಮ BRP ಯಾದ ಶ್ರೀಮತಿ ವಿಜಯಲಕ್ಷ್ಮಿ ಹೆಗಡೆ ಹಾಗೂ ಎಲ್ಲ ನಿರ್ಣಾಯಕರು ತಾಲೂಕಿನ ಎಲ್ಲಾ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು. ಮಧ್ಯಾಹ್ನ ಪ್ರಶಸ್ತಿ ವಿತರಿಸಲಾಯಿತು, ಪ್ರಶಸ್ತಿ ವಿತರಣೆಯಲ್ಲಿ ಶ್ರೀಮತಿ ದೀಪಾ ಕಾಮತ ಶಿಕ್ಷಣ ಸಂಯೋಜಕಿ ಕುಮಟಾ ಅವರು ಕೂಡ ಭಾಗವಹಿಸಿದ್ದರು.

RELATED ARTICLES  ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಆಟೋ ನಡುವೆ ಭೀಕರ ಅಪಘಾತ